` ಜಿಕೆ, ವೈಷ್ಣವಿ, ಅನುಪಮಾ, ದಯಾಳ್ ಬಿಗ್‍ಮಿಲನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
big boss contestants reunite
Dayal's A KaralaRatri

ಬಿಗ್‍ಬಾಸ್‍ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳೆಲ್ಲ ಒಟ್ಟಿಗೇ ಸೇರುತ್ತಿದ್ದಾರೆ. ಇದೇ ಸೋಮವಾರ ಒಂದೇ ದಿನ ಎರಡು ಚಿತ್ರಗಳ ಮುಹೂರ್ತ ನಡೆಯುತ್ತಿದೆ. ಎರಡೂ ಚಿತ್ರಗಳಿಗೆ ಪದ್ಮನಾಭ್ ದಯಾಳ್ ನಿರ್ದೇಶಕ. ಒಂದು ಚಿತ್ರಕ್ಕೆ ಕೆ.ಮಂಜು ನಿರ್ಮಾಪಕರಾದರೆ, ಮತ್ತೊಂದು ಚಿತ್ರಕ್ಕೆ ಸೈಯದ್ ಸಲಾಮ್ ನಿರ್ಮಾಪಕರು. ಒಂದು `ಕರಾಳ ರಾತ್ರಿ' ಚಿತ್ರ, ಮತ್ತೊಂದು `ಪುಟ 109'.

ಜೆಕೆ, ಅನುಪಮಾ ಹಾಗೂ ವೈಷ್ಣವಿ, ಬಿಗ್‍ಬಾಸ್‍ನಲ್ಲಿ ಸ್ಪರ್ಧಿಸಿದ್ದವರು. ನಿರ್ದೇಶಕ ದಯಾಳ್ ಕೂಡಾ  ಬಿಗ್‍ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಿದ್ದವರೇ. ಅಲ್ಲಿಯೇ ಹೀರೋ, ಹೀರೋಯಿನ್‍ಗಳನ್ನು ಫಿಕ್ಸ್ ಮಾಡಿದ್ದ ದಯಾಳ್, ಈಗ ಮುಹೂರ್ತದ ಘಟ್ಟಕ್ಕೆ ಬಂದು ತಲುಪಿದ್ದಾರೆ. ನವೀನ್ ಕೃಷ್ಣ, ರಂಗಾಯಣ ರಘು, ವೀಣಾ ಸುಂದರ್ ಪ್ರಮುಖ ಪಾತ್ರದಲ್ಲಿರುತ್ತಾರೆ. ಒಟ್ಟಿನಲ್ಲಿ ಬಿಗ್‍ಬಾಸ್ ಸ್ಪರ್ಧಿಗಳೆಲ್ಲ ಒಟ್ಟಿಗೇ ಸೇರುತ್ತಿದ್ದಾರೆ.