ಹಿಂದಿಯಲ್ಲಿ ಒಂದು ನಂಬಿಕೆಯಿದೆ. ಸಲ್ಮಾನ್ ಖಾನ್ ಚಿತ್ರಗಳಲ್ಲಿ ಅವರ ದೇಹ ಪ್ರದರ್ಶನವಾಗದೇ ಇದ್ದರೆ, ಸಿನಿಮಾ ಗೆಲ್ಲುವುದು ಡೌಟು ಎಂಬ ನಂಬಿಕೆಯದು. ಹೀಗಾಗಿ ಸಲ್ಲು ಚಿತ್ರಗಳಲ್ಲಿ ಅಂಥಾದ್ದೊಂದು ಸೀನ್ ಸೆಕೆಂಡುಗಳ ಲೆಕ್ಕದಲ್ಲಾದರೂ ಬಂದು ಹೋಗಿರುತ್ತೆ. ಹಿಂದಿಯಲ್ಲಿ ಹೃತಿಕ್, ಶಾರೂಕ್, ಕನ್ನಡದಲ್ಲಿ ದುನಿಯಾ ವಿಜಯ್, ಪುನೀತ್, ದರ್ಶನ್ ಮೊದಲಾದವರು ಈಗಾಗಲೇ ತಮ್ಮ ಸಿಕ್ಸ್‍ಪ್ಯಾಕ್‍ನ್ನು ಸಿನಿಮಾಗಳಲ್ಲಿ ತೋರಿಸಿದ್ದಾರೆ. ಆದರೆ, ಅದರಿಂದ ದೂರವೇ ಇದ್ದವರು ಸುದೀಪ್.
ದೇಹವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡಿರುವ ನಟರಲ್ಲಿ ಸುದೀಪ್ ಕೂಡಾ ಒಬ್ಬರು. ಹೀಗಿದ್ದರೂ, ಸುದೀಪ್ ತಮ್ಮ ದೇಹವನ್ನು ಯಾವುದೇ ಚಿತ್ರಗಳಲ್ಲಿಯೂ ಪ್ರದರ್ಶನ ಮಾಡಿದವರಲ್ಲ. ಆ ಕಾಲ ಈಗ ಹತ್ತಿರವಾಗುತ್ತಿದೆ. ಏಕೆಂದರೆ, ಅವರೀಗ ಪೈಲ್ವಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಅದು ಕೃಷ್ಣ ನಿರ್ದೇಶನದ ಚಿತ್ರ. ಒಬ್ಬ ಪೈಲ್ವಾನ್ ಹೇಗೆಂದರೆ ಹಾಗೆ ಇರೋಕೆ ಸಾಧ್ಯವಿಲ್ಲ. ಅದಕ್ಕೆ ತನ್ನದೇ ಆದ ನಿಯಮಗಳಿವೆ. ಈವರೆಗೂ ಮಾಡಿದ್ದ ಪಾತ್ರಗಳಲ್ಲಿ ದೇಹ ತೋರಿಸಬೇಕಾದ ಅಗತ್ಯ ಇರಲಿಲ್ಲ. ಆದರೆ, ಈ ಚಿತ್ರಕ್ಕೆ ತಯಾರಿ ಮಾಡಿಕೊಳ್ಳಲೇಬೇಕಿದೆ ಎಂದಿದ್ದಾರೆ ಕಿಚ್ಚ.