` ಆರೆಂಜ್ ಆರಂಭ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
orange movie starts
Orange Movie Image

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಶಾಂತ್ ರಾಜ್ ಮತ್ತೊಮ್ಮೆ ಒಂದಾಗಿದ್ದಾರೆ. ಚಮಕ್ ಯಶಸ್ಸಿನ ಝೂಮ್‍ನಲ್ಲಿರುವ ಗಣೇಶ್‍ಗೆ, ಪ್ರಶಾಂತ್ ರಾಜ್ ಜೊತೆ ಇದು 2ನೇ ಚಿತ್ರ. ಸಿನಿಮಾಗೆ ಗಣೇಶ್ ಅವರ ವಿವಾಹ ವಾರ್ಷಿಕೋತ್ಸವದ 10ನೇ ವರ್ಷಾಚರಣೆಯಂದೇ ಮುಹೂರ್ತ ಮಾಡಿರುವುದು ವಿಶೇಷ.

ರಾಜರಾಜೇಶ್ವರಿ ನಗರದ ದೇವಸ್ಥಾನದಲ್ಲಿ ನಡೆದ ಮುಹೂರ್ತದಲ್ಲಿ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ ಚಿತ್ರತಂಡ. ಚಿತ್ರಕ್ಕೆ ತಂತ್ರಜ್ಞರ ಆಯ್ಕೆಯಷ್ಟೇ ಅಗಿದ್ದು, ಉಳಿದ ಕಲಾವಿದರ ಆಯ್ಕೆ ಅಂತಿಮ ಹಂತದಲ್ಲಿದೆ. 

ಅಂದಹಾಗೆ ಗಣೇಶ್-ಶಿಲ್ಪಾ ವಿವಾಹ ವಾರ್ಷಿಕೋತ್ಸವಕ್ಕೆ ಗಣೇಶ್ ಅವರ ಖುಷಿಗೆ ಇನ್ನೂ ಒಂದು ಕಾರಣವಿತ್ತು. ಗಣೇಶ್ ಅವರ ಮಗಳು ತಮ್ಮ ಕೈಯ್ಯಾರೆ ರೂಪಿಸಿದ ಗ್ರೀಟಿಂಗ್‍ವೊಂದನ್ನು ತಂದೆ,ತಾಯಿಗೆ ಉಡುಗೊರೆಯಾಗಿ ನೀಡಿದ್ದು ಎಲ್ಲರ ಗಮನ ಸೆಳೆಯಿತು.

 

Ayushmanbhava Movie Gallery

Ellidhe Illitanaka Movie Gallery