ರಾಜು ಕನ್ನಡ ಮೀಡಿಯಂ, ಯಶಸ್ವಿಯಾಗಿ 25 ದಿನ ಪೂರೈಸಿದ್ದು, ಚಿತ್ರತಂಡ ಥಿಯೇಟರ್‍ನಲ್ಲಿ ಅಭಿಮಾನಿಗಳ ಜೊತೆ ಸಂಭ್ರಮ ಆಚರಿಸಿದೆ. ಚಿತ್ರದ ನಾಯಕ ನಟ ಗುರುನಂದನ್, ನಿರ್ದೇಶಕ ನರೇಶ್, ನಿರ್ಮಾಪಕ ಸುರೇಶ್, ಅಭಿಮಾನಿಗಳ ಮಧ್ಯೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.
ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಇತ್ತೀಚೆಗೆ ಸಿನಿಮಾದವರಿಗಾಗಿಯೇ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಅಂಬರೀಷ್, ಸಾ.ರಾ.ಗೋವಿಂದು, ಸಿ.ಟಿ. ರವಿ ಮೊದಲಾದವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.