ಕಲಾವಿದರ ಸಂಘಕ್ಕೊಂದು ಸ್ವಂತ ಕಟ್ಟಡ. ಅದು ಕನ್ನಡ ಚಿತ್ರರಂಗದ ಕಲಾವಿದರ ಹಲವು ವರ್ಷಗಳ ಕನಸು. ಡಾ.ರಾಜ್ ಇದ್ದಾಗ ಚಿಗುರಿದ ಆ ಕನಸು ನನಸಾಗಿದ್ದು ಇತ್ತೀಚೆಗೆ. ಕಲಾವಿದರ ಸಂಘದ ಕಟ್ಟಡ ಉದ್ಘಾಟನೆಯಾಗಿದ್ದು ಕೂಡಾ ಇತ್ತೀಚೆಗೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆ ಕಟ್ಟಡವನ್ನು ಉದ್ಘಾಟಿಸಿ, ಚಿತ್ರರಂಗದವರ ಜೊತೆ ಸಂಭ್ರಮಿಸಿ ಹೋಗಿದ್ದರು.
ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಕುರಿತಂತೆ ಕಿಚ್ಚ ಸುದೀಪ್ ವಿಶೇಸವಾಗಿ ಮೂವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಅಂಬರೀಷ್, ರಾಕ್‍ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ. ಇಡೀ ಕಟ್ಟಡದ ಕನಸನ್ನು ನನಸಾಗಿದ್ದು ಒಬ್ಬ ವ್ಯಕ್ತಿ. ಅದು ಅಂಬರೀಷ್ ಸರ್. ಅವರ ಜೊತೆ ಗಟ್ಟಿಯಾಗಿ ನಿಂತವರು ಇಬ್ಬರು. ರಾಕ್‍ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಎಂದಿದ್ದಾರೆ ಸುದೀಪ್.
ಕಟ್ಟಡ ಉದ್ಘಾಟನೆ ಸಮಾರಂಭದ ಒಂದು ಗ್ರೂಪ್ ಫೋಟೋ ಟ್ವೀಟ್ ಮಾಡಿರುವ ಸುದೀಪ್, ನೋಡೋಕೆ ಇದು ಸಾಮಾನ್ಯ ಗ್ರೂಪ್ ಫೋಟೋದಂತೆ ಕಾಣುತ್ತೆ. ಆದರೆ, ಇದರ ಹಿಂದೆ ನಾವೆಲ್ಲ ಸೆಲ್ಯೂಟ್ ಹೊಡೆಯಬೇಕಾದ ಸಾಧಕರಿದ್ದಾರೆ ಎಂದು ಸ್ಮರಿಸಿದ್ದಾರೆ ಕಿಚ್ಚ ಸುದೀಪ್.