ಹಂಬಲ್ ನೊಗ್‍ರಾಜ್, ಪೊಲಿಟಿಕಲ್ ಕಾಮಿಡಿ ಚಿತ್ರದ ನಿರ್ಮಾಪಕರ ಮುಖದಲ್ಲೀಗ ನಗುವೋ ನಗು. ಚಿತ್ರಕ್ಕೆ ಹಾಕಿದ ಬಂಡವಾಳದ ಜೊತೆ ಲಾಭವೂ ಬಂದಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಈಗ ಸಂತಸದಲ್ಲಿದ್ದಾರೆ.
ಇದೀಗ ಚಿತ್ರ ಇನ್ನೂ ಒಂದು ದಾಖಲೆ ಬರೆದಿದೆ. ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋಗೆ ಮಾರಾಟವಾಗಿದೆ. ಅಮೇಜಾನ್ ಪ್ರೈಮ್ ವಿಡಿಯೋ ಖರೀದಿಸಿರುವ ಮೊದಲ ಕನ್ನಡ ಚಿತ್ರ ಆಪರೇಷನ್ ನೊಗ್‍ರಾಜ್.
ಥಿಯೇಟರಿನಿಂದಲೇ ಲಾಭ ಮಾಡಿದ್ದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಈಗ ಅಮೇಜಾನ್‍ನಲ್ಲೂ ಲಾಭ ಪಡೆದಿದೆ. ಅಂದಹಾಗೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಇನ್ನೂ ಪುಷ್ಕರ್ ಅವರ ಬಳಿಯೇ ಇದೆ. ಡಿಮ್ಯಾಂಡೂ ಇದೆ.