ಹರಿಪ್ರಿಯಾ ಈಗ ಸಿಕ್ಕಾಪಟ್ಟೆ ಬ್ಯುಸಿ ನಟಿ. ಅವರ ಸಂಹಾರ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಇನ್ನೊಂದು ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ ಶೂಟಿಂಗ್‍ನ ಕೊನೆಯ ಹಂತದಲ್ಲಿದೆ. ಸೂಜಿದಾರ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ತೆಲುಗಿನಲ್ಲಿ ನಟಿಸಿದ್ದ ಜೈಸಿಂಹ, ಭರ್ಜರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಬೆಲ್‍ಬಾಟಮ್ ಚಿತ್ರಕ್ಕೆ ರೆಡಿಯಾಗಿದ್ದಾರೆ ಹರಿಪ್ರಿಯಾ.
ಬೆಲ್‍ಬಾಟಮ್ ಚಿತ್ರದ ಬಗ್ಗೆ ಹರಿಪ್ರಿಯಾ ಖುಷಿ ಪಡೋಕೆ ಕಾರಣಗಳಿವೆ. ಏಕೆಂದರೆ, ಇಡೀ ಚಿತ್ರದ ಸ್ಕ್ರಿಪ್ಟ್ ಅವರ ಕೈಲಿದೆ. ಇಷ್ಟು ವರ್ಷಗಳಲ್ಲಿ ಈ ರೀತಿ ಚಿತ್ರದ ಇಡೀ ಸ್ಕ್ರಿಪ್ಟ್ ನೋಡುತ್ತಿರುವುದು ಅವರಿಗೂ ಮೊದಲ ಅನುಭವ. ರಿಷಬ್ ಶೆಟ್ಟಿ ನಾಯಕರಾಗಿರುವ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ.
80ರ ದಶಕದ ಕಥೆ. ವಸ್ತ್ರ ವಿನ್ಯಾಸ, ಡೈಲಾಗ್ ಪ್ರತಿಯೊಂದೂ ವಿಭಿನ್ನವಾಗಿದೆ. ಚಿತ್ರದ ಮೇಲೆ ಭಾರಿ ವಿಶ್ವಾಸ ಇಟ್ಟುಕೊಂಡಿದ್ದಾರೆ.