ಪ್ರೇಮ ಬರಹ ಚಿತ್ರದಲ್ಲಿನ ಅತಿ ದೊಡ್ಡ ಸ್ಟಾರ್ ಯಾರು ಎಂದರೆ, ಅನುಮಾನವೇ ಇಲ್ಲದಂತೆ ಅದು ಅರ್ಜುನ್ ಸರ್ಜಾ ಎಂದು ಹೇಳಬಹುದು. ಚಿತ್ರದ ಕ್ಯಾಪ್ಟನ್ ಅಂದರೆ ನಿರ್ದೇಶಕರು ಅವರೇ. ಕಥೆ, ಚಿತ್ರಕಥೆಯೂ ಅವರದ್ದೇ. ಅವರ ಮಗಳೇ ಹೀರೋಯಿನ್. ಚಂದನ್ ಹೀರೋ. ಆದರೆ, ಇವರೆಲ್ಲರ ಹೊರತಾಗಿ ಇನ್ನೂ ಕೆಲವು ಹೀರೋಗಳಿದ್ದಾರೆ.
ಸರ್ಜಾ ಕುಟುಂಬದವರು ಆಂಜನೇಯನ ಭಕ್ತರು ಎನ್ನುವುದು ಇಡೀ ಚಿತ್ರರಂಗಕ್ಕೆ ಗೊತ್ತು. ಅಭಿಮಾನಿಗಳಿಗೂ ಗೊತ್ತು. ಚಿತ್ರದಲ್ಲಿ ಆಂಜನೇಯನ ಮೇಲೊಂದು ಹಾಡಿದೆ. ಅದೂ, ವಿಜಯ ನಾರಸಿಂಹ ಬರೆದಿದ್ದ ಗೀತೆ. ಆ ಹಾಡಿನಲ್ಲಿ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಕುಣಿದು ಕುಪ್ಪಳಿಸಿದ್ದಾರೆ. ಬಂಪರ್ ಎನ್ನುವಂತೆ ಹಾಡಿನಲ್ಲಿ ನಟ ದರ್ಶನ್ ಕೂಡಾ ಹೆಜ್ಜೆ ಹಾಕಿದ್ದಾರೆ. ಒಂದೇ ಹಾಡಿನಲ್ಲಿ ಚಿತ್ರರಸಿಕರಿಗೆ ನಾಲ್ವರು ಸ್ಟಾರ್‍ಗಳನ್ನು ನೋಡುವ ಭಾಗ್ಯ. ಇದೇ ವಾರ ತೆರೆಗೆ ಬರುತ್ತಿದೆ. ಎಂಜಾಯ್ ಮಾಡಿ.
ಚಿತ್ರ ತಮಿಳಿನಲ್ಲೂ ಬರುತ್ತಿದ್ದು ಸೊಲ್ಲಿವಿಡವಾ ಅನ್ನೋ ಹೆಸರಿನಲ್ಲಿ ಬರುತ್ತಿದೆ.