ಖ್ಯಾತ ಗಾಯಕ ಸೋನು ನಿಗಮ್, ಕನ್ನಡದಲ್ಲಷ್ಟೇ ಅಲ್ಲ, ಬಾಲಿವುಡ್‍ನಲ್ಲೂ ಸುಪ್ರಸಿದ್ಧ ಗಾಯಕ. ದ.ಭಾರತದ ಎಲ್ಲ ಭಾಷೆಗಳಲ್ಲೂ ಹಾಡಿರುವ ಸೋನು ಧ್ವನಿಗೆ ದೇಶಾದ್ಯಂತ ಬೇಡಿಕೆ ಇದೆ. ಸ್ಟಾರ್ ಗಾಯಕರಾಗಿರುವ ಸೋನು ನಿಗಮ್‍ಗೆ ಈಗ ಜೀವಬೆದರಿಕೆ ಇದೆಯಂತೆ.
ಹಾಗಂತ ಸೋನು ನಿಗಮ್ ಅವರೇನೂ ದೂರು ಕೊಟ್ಟಿಲ್ಲ. ಗುಪ್ತಚರ ಇಲಾಖೆಗೆ ಈ ಕುರಿತು ಮಾಹಿತಿ ಸಿಕ್ಕಿದ್ದು, ತಕ್ಷಣ ಸೋನು ನಿಗಮ್‍ಗೆ ಭದ್ರತೆ ಒದಗಿಸಿದ್ದಾರೆ. ಮುಂಬೈನಲ್ಲಿರುವ ಅವರ ನಿವಾಸ, ಸ್ಟುಡಿಯೋ ಸೇರಿದಂತೆ ಎಲ್ಲೆಡೆ ಪೊಲೀಸ್ ಭದ್ರತೆ ನೀಡಲಾಗಿದೆ.
ಮಸೀದಿಗಳಲ್ಲಿನ ಆಜಾನ್ ಬಗ್ಗೆ ಇದು ಧಾರ್ಮಿಕತೆಯ ಗೂಂಡಾಗಿರಿ ಎಂದು ಟ್ವೀಟ್ ಮಾಡಿದ್ದ ಸೋನು ನಿಗಮ್, ಮುಸ್ಲಿಮ್ ಮೂಲಭೂತವಾದಿಗಳ ವಿರೋಧ ಕಟ್ಟಿಕೊಂಡಿದ್ದರು. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಕ್ಕೆ ವಿರೋಧ ವ್ಯಕ್ತಪಡಿಸಿ, ಹಿಂದೂಗಳ ಕೆಂಗಣ್ಣಿಗೂ ಗುರಿಯಾಗಿದ್ದರು.