ನಟಿಯಾಗಿದ್ದಾಗ ಸ್ಯಾಂಡಲ್‍ವುಡ್ ಕ್ವೀನ್ ಆಗಿದ್ದ ರಮ್ಯಾ, ವಿವಾದಗಳ ನಡುವೆಯೂ ಸ್ಟಾರ್ ಆಗಿಯೇ ಇದ್ದರು. ಆದರೆ, ರಾಜಕೀಯಕ್ಕೆ ಹೋಗಿದ್ದೇ ಹೋಗಿದ್ದು, ವಿವಾದಗಳ ಮೂಟೆಯನ್ನೇ ಹೊತ್ತು ತಿರುಗುವಂತಾಗಿದೆ. ಆಗಿರೋದು ಇಷ್ಟು.
ಕಾಂಗ್ರೆಸ್‍ನ ಕಾರ್ಯಕರ್ತರಿಗೆ ಟ್ವಿಟರ್, ಫೇಸ್‍ಬುಕ್ ಬಗ್ಗೆ ಪಾಠ ಮಾಡುತ್ತಿದ್ದ ಅಖಿಲ ಭಾರತ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಂಗ್‍ನ ಮುಖ್ಯಸ್ಥೆ ರಮ್ಯಾ, ಫೇಕ್ ಅಕೌಂಟ್‍ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮದೂ ಕೂಡಾ ಎರಡು, ಮೂರು ಅಕೌಂಟ್ ಇದೆ. ದಿವ್ಯ ಸ್ಪಂದನಾ ಹೆಸರಿನಲ್ಲಿರುವುದು ಒಂದು ಖಾತೆ. ಇನ್ನೂ ಕೆಲವು ಖಾತೆಗಳಿವೆ. ಫೇಕ್ ಅಕೌಂಟ್ ಇಟ್ಟುಕೊಳ್ಳೊದ್ರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.
ಹಾಗಾದರೆ, ಇತ್ತೀಚೆಗೆ ಕಾಂಗ್ರೆಸ್‍ಗೆ ಟ್ವಿಟರ್, ಫೇಸ್‍ಬುಕ್‍ನಲ್ಲಿ ರೀಟ್ವೀಟ್, ಲೈಕುಗಳ ಸುರಿಮಳೆ ಹೆಚ್ಚಿದ್ದರ ಹಿಂದೆ ಫೇಕ್ ಅಕೌಂಟ್‍ಗಳ ಪಾತ್ರ ದೊಡ್ಡದಾ..? ಇತ್ತೀಚೆಗಷ್ಟೇ ನರೇಂದ್ರ ಮೋದಿಗೆ ಡ್ರಗ್ಸ್ ಅಮಲು ಎಂಬರ್ಥದಲ್ಲಿ ಟ್ವೀಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದ ರಮ್ಯಾ, ಈ ಬಾರಿ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದಾರೆ.