ಚಿಕ್ಕಣ್ಣ ಎಂದ ಕೂಡಲೇ ಜನರ ಮುಖದಲ್ಲಿ ನಗು ಅರಳುತ್ತೆ. ಮುಖ ನೋಡಿದರೆ ಹಲ್ಲು ಓಪನ್ ಆಗುತ್ತೆ. ಇನ್ನು ಚಿಕ್ಕಣ್ಣ ಡೈಲಾಗ್ ಹೊಡೆಯೋಕೆ ಶುರು ಮಾಡಿದ್ರೆ, ಗಹಗಹಿಸಿ ನಗುವುದಷ್ಟೇ ಬಾಕಿ. ಅದು ಚಿಕ್ಕಣ್ಣ ಕಾಮಿಡಿಗಿರುವ ಸ್ಪೆಷಾಲಿಟಿ.
ಆದರೆ, ಅಂಥಾ ಚಿಕ್ಕಣ್ಣ ಈಗ ಸೀರಿಯಸ್ ಪಾತ್ರ ಮಾಡಿದ್ದಾರಂತೆ. ಸಂಹಾರ ಚಿತ್ರದಲ್ಲಿ ಚಿಕ್ಕಣ್ಣ ಅವರದ್ದು ಇನ್ಸ್‍ಪೆಕ್ಟರ್ ಪಾತ್ರ. ಸಿಕ್ಕಾಪಟ್ಟೆ ಸೀರಿಯಸ್ ಆಗಿದೆ ಎಂದಿದ್ದಾರೆ ಚಿಕ್ಕಣ್ಣ.
ಆದರೆ, ಟ್ರೇಲರ್‍ನಲ್ಲಿ ಕಾಮಿಡಿಯೇ ಇದ್ಯಲ್ಲ ಅಂದ್ರೆ, ಅದು ಸಿಚುಯೇಷನ್ ಕಾಮಿಡಿ ಅಷ್ಟೆ, ಉಳಿದಂತೆ ಸೀರಿಯಸ್ ಪಾತ್ರ ಅಂತಾರೆ ಚಿಕ್ಕಣ್ಣ.
ಅಂದಹಾಗೆ ಚಿಕ್ಕಣ್ಣಗೆ ಒಬ್ಬ ನಟನಾಗಿ ಇಮೇಜ್ ಸೃಷ್ಟಿಸಿದ್ದು ರಾಜಾಹುಲಿ. ಆ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನದಲ್ಲಿಯೇ ಚಿಕ್ಕಣ್ಣ ಹೊಸ ಇಮೇಜ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಗುಡ್‍ಲಕ್.