ಸಾಮಾನ್ಯವಾಗಿ ಮಕ್ಕಳ ಪ್ರೇಮಕ್ಕೆ ಅಪ್ಪ, ಅಮ್ಮಂದಿರು ವಿರೋಧ ವ್ಯಕ್ತಪಡಿಸೋದು ಸಹಜ. ಆದರೆ, ಇಲ್ಲಿ ಹಾಗಲ್ಲ. ಮಗಳು ಸರಿಯಾಗಿ ಲವ್ ಮಾಡ್ತಿಲ್ಲ ಅಂದ್ರೆ, ಅಪ್ಪನೇ ಸರಿಯಾಗಿ ಹೇಳಿಕೊಡಬೇಕು. ಪ್ರೀತಿ, ಪ್ರೇಮದ ವಿಚಾರದಲ್ಲಿ ಅಪ್ಪನೇ ಮಗಳಿಗೆ ಮಾರ್ಗದರ್ಶನ ಮಾಡಬೇಕು. ಮಗಳಿಗಷ್ಟೇ ಅಲ್ಲ, ಮಗಳನ್ನು ಪ್ರೀತಿಸುವ ಹುಡುಗನಿಗೂ ಈ ಹುಡುಗಿಯ ಅಪ್ಪನೇ ಗೈಡ್. ಹೇಗೆ ಲವ್ ಮಾಡಬೇಕು ಅನ್ನೋದನ್ನು ಆತನಿಗೂ ಹೇಳಿಕೊಡಬೇಕು.
ಇದು ಸಿನಿಮಾ ಕಥೆಯಲ್ಲ. ಆದರೆ, ಸಿನಿಮಾಗಾಗಿ ವಾಸ್ತವದಲ್ಲಿ ನಡೆದ ಕಥೆ. ಚಿತ್ರ ಪ್ರೇಮಬರಹ. ಈ ಚಿತ್ರಕ್ಕೆ ಅಪ್ಪ ಅರ್ಜುನ್ ಸರ್ಜಾ ನಿರ್ದೇಶಕರಾದರೆ, ಮಗಳು ಐಶ್ವರ್ಯಾ ನಾಯಕಿ. ಅಪ್ಪ ನಿರ್ದೇಶಿಸಿ, ಮಗಳು ನಟಿಸಿರುವ ಪ್ರೇಮಬರಹ ಈ ವಾರ ತೆರೆಗೆ ಬರುತ್ತಿದೆ.