ಸಂಹಾರ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರದ್ದು ಅಂಧನ ಪಾತ್ರ. ಅಡುಗೆ ಭಟ್ಟನೂ ಹೌದು. ಚಿತ್ರದ ಟ್ರೇಲರ್ ನೋಡುತ್ತಿದ್ದರೆ, ಹರಿಪ್ರಿಯಾ ಚಿರಂಜೀವಿ ಸರ್ಜಾರ ಪ್ರೇಯಸಿ ಎನಿಸುವುದು ನಿಜ. ರಾಕ್ಷಸಿ ಎನಿಸುವುದೂ ನಿಜ. ಒಂದು ವಿಭಿನ್ನ ಪಾತ್ರದ ಜೊತೆಯಲ್ಲೇ ಹರಿಪ್ರಿಯಾ ತಮ್ಮ ಬಹುದಿನ ಕನಸನ್ನೂ ಈಡೇರಿಸಿಕೊಂಡಿದ್ದಾರೆ.
ಚಿತ್ರದಲ್ಲೊಂದು ಫೈಟಿಂಗ್ ಸೀನ್ ಕೂಡಾ ಇದೆ. ಅದು ಚಿರು ಜೊತೆ. ಆರಂಭದಲ್ಲಿ ಆ ಫೈಟಿಂಗ್ ಸೀನ್ ಮಾಡೋಕೆ ಕಷ್ಟಪಟ್ಟರಂತೆ ಹರಿಪ್ರಿಯಾ.
ಒಂದು ಹಂತದಲ್ಲಂತೂ ನಿರ್ದೇಶಕರು ಡ್ಯೂಪ್ ಬಳಸುವ ಯೋಚನೆಯನ್ನೂ ಮಾಡಿದ್ದರಂತೆ. ಕೊನೆಗೆ ನಾನೇ ಡ್ಯೂಪ್ ಇಲ್ಲದೆ ತಾವೇ ಆ ಸಾಹಸ ದೃಶ್ಯ ನಿರ್ವಹಿಸಿದ್ದಾರೆ ಹರಿಪ್ರಿಯಾ.
ಮಾಡುವಾಗ ಏನೋ ಉತ್ಸಾಹದಿಂದ ಮಾಡಿಬಿಟ್ಟೆವು. ಹಿಂದೆ ಮುಂದೆ ಹಾರುವ ದೃಶ್ಯಗಳನ್ನೆಲ್ಲ ಮಾಡಿಬಿಟ್ಟೆ. ಆಮೇಲೆ ಅನುಭವಿಸಿದ ನೋವಿನದ್ದು ಇನ್ನೊಂದು ಕಥೆ. ಆದರೆ, ಆ ದೃಶ್ಯಗಳನ್ನು ನೋಡಿದಾಗ ಆ ನೋವುಗಳೆಲ್ಲ ಮಾಯವಾಗಿಬಿಡುತ್ತೆ ಎಂದಿದ್ದಾರೆ ಹರಿಪ್ರಿಯಾ.
ಹರಿಪ್ರಿಯಾಗೆ ಸಾಹಸ ಹೊಸದೇನಲ್ಲ. ಈ ಹಿಂದೆ ರಿಕ್ಕಿ ಚಿತ್ರದಲ್ಲಿ ನಕ್ಸಲೈಟ್ ಪಾತ್ರದಲ್ಲಿ ನಟಿಸಿದ್ದ ಹರಿಪ್ರಿಯಾ, ಈ ಸಿನಿಮಾದಲ್ಲಿ ಅಕ್ಷರಶಃ ಫೈಟರ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಇದು ಕಮರ್ಷಿಯಲ್ ಸಿನಿಮಾ. ಈ ವಾರ ಥಿಯೇಟರಲ್ಲಿ ಕಂಗೊಳಿಸಲಿದೆ.