ಕರ್ನಾಟಕದಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಕೊಡುತ್ತಿರುವ ರಾಜು ಕನ್ನಡ ಮೀಡಿಯಂ ಚಿತ್ರ ವಿದೇಶಕ್ಕೆ ಹಾರೋಕೆ ಸಿದ್ಧವಾಗಿದೆ. ಕೆ.ಎ.ಸುರೇಶ್ ನಿರ್ಮಾಣದ ರಾಜು ಕನ್ನಡ ಮೀಡಿಯಂ ಚಿತ್ರಕ್ಕೆ ಸುದೀಪ್ ಸ್ಟಾರ್‍ಪಟ್ಟವನ್ನೇ ಕೊಟ್ಟಿದ್ದರು. ಗುರುನಂದನ್, ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಚಿಕ್ಕಣ್ಣ ನಟಿಸಿರುವ ರಾಜು ಕನ್ನಡ ಮೀಡಿಯಂ ವಿದೇಶಿ ಮಾರುಕಟ್ಟೆಗೆ ಲಗ್ಗೆಯಿಡೋಕೆ ಹೊರಟಿದೆ.
ಕೆನಡ, ಸಿಂಗಾಪುರ್, ಆಸ್ಟ್ರೇಲಿಯ ಹಾಗೂ ಅಮೆರಿಕಾಗಳಲ್ಲಿ 30 ಚಿತ್ರಮಂದಿರಗಳಲ್ಲಿ ರಾಜು ಕನ್ನಡ ಮೀಡಿಯಂ ಪ್ರದರ್ಶನವಾಗುತ್ತಿದೆ. ಇಡೀ ವಾರ ಯಾವುದೇ ದಿನ ಬೇಕಾದರೂ ಸಿನಿಮಾ ನೋಡಬಹುದು. ಮಲ್ಟಿಪ್ಲೆಕ್ಸ್‍ಗಳನ್ನು ಇಡೀ ವಾರಕ್ಕೆ ಬುಕ್ ಮಾಡಲಾಗಿದೆ ಎಂದು ಹೇಳಿದೆ ಚಿತ್ರತಂಡ.