ಪ್ರೇಮಬರಹ ಚಿತ್ರದ ಹೆಸರು ಕೇಳಿದರೆ ತಕ್ಷಣ ಅದೊಂದು ಲವ್‍ಸ್ಟೋರಿ ಅನ್ನಿಸೋದು ಸಹಜ. ಪ್ರೀತಿ ಎಂದರೆ ಅರ್ಥ ಮಾಡಿಕೊಳ್ಳೋದು, ಪ್ರೀತಿ ಎಂದರೆ ತ್ಯಾಗ ಮಾಡೋದು ಅನ್ನೋ ಲೈನ್ ಚಿತ್ರದ ಟ್ರೇಲರ್‍ನಲ್ಲಿದೆ. ಆದರೆ, ಸಿನಿಮಾ ಕೇವಲ ಲವ್‍ಸ್ಟೋರಿಯಷ್ಟೇ ಅಲ್ಲ. ಅಲ್ಲಿ ದೇಶಪ್ರೇಮದ ಕಥೆಯೂ ಇದೆ.
ಚಿತ್ರದ ನಾಯಕಿ ಐಶ್ವರ್ಯಾ ಸರ್ಜಾ, ಚಿತ್ರದ ನಾಯಕ ಚಂದನ್.. ಇಬ್ಬರದ್ದೂ ಚಿತ್ರದಲ್ಲಿ ಜರ್ನಲಿಸ್ಟುಗಳ ಪಾತ್ರ. ಹಾಸ್ಯದ ಒಗ್ಗರಣೆ ಹಾಕೋಕೆ ಸಾಧುಕೋಕಿಲ, ಮಂಡ್ಯ ರಮೇಶ್.. ಭಾವನೆಯ ಬುತ್ತಿ ಕೊಡೋಕೆ ಪ್ರಕಾಶ್ ರೈ, ಸುಹಾಸಿನಿ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಯುದ್ಧದ ಸನ್ನಿವೇಶವೂ ಇದೆ. ಆ ಯುದ್ಧ ಸನ್ನಿವೇಶಕ್ಕೂ, ಚಿತ್ರದ ಕಥೆಗೂ ಏನು ಸಂಬಂಧ..? ಅದನ್ನು ಈ ವಾರ ಮಿಸ್ ಮಾಡದೇ ಚಿತ್ರಮಂದಿರಕ್ಕೆ ಹೋಗಿ ನೋಡಿ. ಮಗಳನ್ನು ನಾಯಕಿಯನ್ನಾಗಿ ಪರಿಚಯಿಸುತ್ತಿರುವ ಅರ್ಜುನ್ ಸರ್ಜಾ, ಇಡೀ ಚಿತ್ರದ ಹೊಣೆಯನ್ನು ಅಕ್ಷರಶಃ ಹೆಗಲ ಮೇಲೆ ಹೊತ್ತು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.