ರಾಜಸಿಂಹನಾಗಿ ಅನಿರುದ್ಧ ತೆರೆಗೆ ಬರುತ್ತಿದ್ದಾರೆ. ಇದೇ ಶುಕ್ರವಾರ ಚಿತ್ರಮಂದಿರಗಳಲ್ಲಿ ಗರ್ಜಿಸಲು ಸಿದ್ಧವಾಗಿರುವ ರಾಜಸಿಂಹನಿಗೆ ಈ ಚಿತ್ರದಲ್ಲಿ ಇಬ್ಬರು ಸಿಂಹಿಣಿಯರು. ಅನಿರುದ್ಧ ಅವರ ಚಿತ್ರಗಳಲ್ಲಿಯೇ ಇದು ಅತ್ಯಂತ ವಿಶೇಷ ಎನಿಸುವುದು ಇದೇ ಕಾರಣಕ್ಕೆ.
ಚಿತ್ರದಲ್ಲಿ ನಿಖಿತಾ ತುಕ್ರಾಲ್ ನಾಯಕಿ. ಮದುವೆಗೆ ಮುನ್ನ ನಿಖಿತಾ ಅಭಿನಯಿಸಿದ ಕೊನೆಯ ಚಿತ್ರವೂ ಹೌದು. ಚಿತ್ರದಲ್ಲಿ ಒಬ್ಬ ಪಕ್ಕಾ ಸಿಟಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ನಿಖಿತಾ. ಬಬ್ಲಿ ಹುಡುಗಿ.
ಇಡೀ ಚಿತ್ರದಲ್ಲಿ ನಿಮಗೆ ಎದ್ದು ಕಾಣುವುದು ಅನಿರುದ್ಧ. ಅವರ ಶ್ರಮಕ್ಕೆ ಈ ಚಿತ್ರದಲ್ಲಿ ಗೆಲುವು ಸಿಗಲೇಬೇಕು ಎಂದು ಹಾರೈಸಿದ್ದಾರೆ ನಿಖಿತ.
ಇನ್ನು ಚಿತ್ರದ ಗ್ಲಾಮರ್ ಹೆಚ್ಚಿಸಿರುವುದು ಗ್ಲಾಮರ್ ಕ್ವೀನ್ ಸಂಜನಾ ಗರ್ಲಾನಿ. ಫಾರಿನ್ ರಿಟನ್ರ್ಡ್ ಹುಡುಗಿಯಾಗಿ ಕಾಣಿಸಿರುವ ಸಂಜನಾ, ಇಡೀ ಚಿತ್ರದ ಟರ್ನಿಂಗ್ ಪಾಯಿಂಟ್. ಅನಿರುದ್ಧ ಪಾತ್ರ ತನ್ನ ಗುರಿಯನ್ನು ಮುಟ್ಟಲು ಸಹಕಾರ ನೀಡುವ ಪಾತ್ರ.
ಆದರೆ, ಇಡೀ ಚಿತ್ರದ ಫೋರ್ಸ್ ಅನಿರುದ್ಧ. ನಾನು ತೆರೆಯ ಮೇಲಿರುವಷ್ಟೂ ಹೊತ್ತು ಚಿತ್ರದ ಸೆಂಟರ್ ಪಾಯಿಂಟ್ ನಾನೇ ಎನ್ನುತ್ತಾರೆ ಸಂಜನಾ.
ಇಬ್ಬರು ಸಿಂಹಿಣಿಯರ ಮಧ್ಯೆ ರಾಜಸಿಂಹ ಹೇಗಿದ್ದಾರೆ..? ಕುತೂಹಲಕ್ಕೆ ಉತ್ತರ ಈ ಶುಕ್ರವಾರ.