`ರಾಜಸಿಂಹ' ಅನಿರುದ್ಧ, ಸಂಜನಾ ಗರ್ಲಾನಿ, ನಿಖಿತ ಅಭಿನಯದ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದ ವಿಶೇಷವೆಂದರೆ, ಚಿತ್ರದಲ್ಲಿ ನೀವು ರಾಜಸಿಂಹನನ್ನಷ್ಟೇ ಅಲ್ಲ, ಸಾಹಸಸಿಂಹನನ್ನೂ ನೋಡಬಹುದು. ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಮೂಲಕ ತೆರೆಗೆ ತರಲಾಗಿದೆ.
ಇದು ಸಿಂಹಾದ್ರಿಯ ಸಿಂಹ ಚಿತ್ರದ ಮುಂದುವರಿದ ಕಥೆ ಎನ್ನುವ ಸುದ್ದಿಗಳೂ ಇವೆ. ಆದರೆ, ಚಿತ್ರತಂಡ ಅದನ್ನು ಗುಟ್ಟಾಗಿಯೇ ಇಟ್ಟುಕೊಂಡಿದೆ. ಇನ್ನೆಷ್ಟು ದಿನ. ಫೆಬ್ರವರಿ 2ರ ನಂತರ ಎಲ್ಲ ಗುಟ್ಟುಗಳೂ ರಟ್ಟಾಗಲಿವೆ. ಭಾರತಿ ವಿಷ್ಣುವರ್ಧನ್ ಕೂಡಾ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ವಿಷ್ಣು ಮೊಮ್ಮಕ್ಕಳಾದ ಶ್ಲೋಕ ಮತ್ತು ಜೇಷ್ಠವರ್ಧನ ಅವರನ್ನೂ ಚಿತ್ರದಲ್ಲಿ ನೋಡಬಹುದು. ಅವರು ಅನಿರುದ್ಧ ಅವರ ಮಕ್ಕಳು.
ಒಟ್ಟಿನಲ್ಲಿ ರಾಜಸಿಂಹ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಕುಟುಂಬವೇ ಇರಲಿದೆ. ವಿಷ್ಣು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಚಿತ್ರ ರಾಜಸಿಂಹ.