ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಮೇಲೆ ಹಾಕಲು ಗೆಟಪ್‍ಗಳಿಗಾಗಿ ಹುಡುಕಾಡಬೇಕು. ಆದರೆ, ನಿರ್ದೇಶಕರಾಗಿ ಪ್ರೇಮ್ ಇದ್ದ ಮೇಲೆ ಗೆಟಪ್ಪುಗಳಿಗೇನೂ ಬರ ಇರಲ್ಲ. ಅವರು ಒಂದೇ ಸಿನಿಮಾದಲ್ಲಿ ಹತ್ತಾರು ಗೆಟಪ್ ಹಾಕಿಸಿ, ವಿಭಿನ್ನವಾಗಿ ತೋರಿಸೋದ್ರಲ್ಲಿ ಎತ್ತಿದ ಕೈ.
ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಹಾಡಿನ ಶೂಟಿಂಗ್‍ನಲ್ಲಿ ಶಿವಣ್ಣ ಅಣ್ಣಾವ್ರ ಸ್ಟೈಲ್‍ನ ಗೆಟಪ್‍ನಲ್ಲಿ ಕಾಣಿಸಿದ್ದಾರೆ. ಆ್ಯಮಿ ಜಾಕ್ಸನ್, ಮುದ್ದು ಮುದ್ದು ಹಳ್ಳಿ ಬೆಡಗಿ. ಏನ್ ಕಥೆ ಇದು..? ಮದುವೆ ಸೀನಾ..? ಡ್ರೀಮ್ ಸೀನಾ..? ಡೈರೆಕ್ಟರ್ ಪ್ರೇಮ್ ಅವರೇ ಹೇಳಬೇಕು.
ಅಂದಹಾಗೆ ಶಿವರಾಜ್ ಕುಮಾರ್ ಅವರದ್ದಾದರೂ ಒಂದೆರಡು ಫೋಟೋ ಹೊರಬಿದ್ದಿವೆ. ಸುದೀಪ್ ಅವರದ್ದು ಟೀಸರ್ ಬಿಟ್ಟರೆ ಬೇರೇನೂ ಹೊರಬಂದಿಲ್ಲ. ಸುದೀಪ್ ಇನ್ನೆಂಗಿದ್ದಾರೋ..?