ಹೊಸ ವರ್ಷದ 2ನೇ ತಿಂಗಳೇ ಚಿತ್ರಮಂದಿರಗಳು ತುಂಬಿ ತುಳುಕುವಂತಾ ವಾತಾವರಣ ನಿರ್ಮಾಣವಾಗುತ್ತಿದೆ. 2017ರ ಕೊನೆಯಲ್ಲಿ.. ಅದರಲ್ಲೂ ಅಕ್ಟೋಬರ್, ನವೆಂಬರ್, ಡಿಸೆಂಬರ್‍ನಲ್ಲಿ ಸಿನಿಮಾಗಳು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆಯಾಗಿದ್ದವು. ಆದರೆ, ಈಗ 2018ರಲ್ಲಿ ವರ್ಷದ ಆರಂಭದಲ್ಲೇ ದೊಡ್ಡ ಕ್ಯೂ ಸೃಷ್ಟಿಯಾಗಿದೆ.
ಫೆಬ್ರವರಿ 2ನೇ ತಾರೀಕು, ಗಾಂಧಿನಗರದಲ್ಲಿ 8 ಸಿನಿಮಾ ರಿಲೀಸ್ ಆಗುತ್ತಿವೆ. ಇವುಗಳಲ್ಲಿ ಬಿಗ್‍ಬಾಸ್ ಪ್ರಥಮ್ ಅಭಿನಯದ ದೇವ್ರಂತಾ ಮನುಷ್ಯ ಚಿತ್ರ, ಪ್ರಥಮ್ ಕಾರಣದಿಂದಲೇ ನಿರೀಕ್ಷೆ ಹುಟ್ಟಿಸಿರುವ ಚಿತ್ರ.
ಅನಿರುದ್ಧ ಮತ್ತು ಸಂಜನಾ ಅಭಿನಯದ ರಾಜಾಸಿಂಹ ಚಿತ್ರ... ಹಾಡು ಮತ್ತು ಮೇಕಿಂಗ್‍ನಿಂದಾಗಿ ಗಮನ ಸೆಳೆದಿದೆ.
ಮಂಜರಿ ಹಾರರ್ ಚಿತ್ರವಾಗಿ ಗಮನ ಸೆಳೆಯುತ್ತಿದೆ. ಉಳಿದಂತೆ ಜಪ, ಮಳೆಗಾಲ, ಆ ಒಂದು ದಿನ, ಸಂಜೀವ, ಜಂತರ್ ಮಂತರ್ ಎಂಬ ಚಿತ್ರಗಳು ಥಿಯೇಟರಿಗೆ ಬರುತ್ತಿವೆ.
ಎಂಟರಲ್ಲಿ ಪ್ರೇಕ್ಷಕ ಯಾವ ಚಿತ್ರದೊಂದಿಗೆ ನಂಟು ಮಾಡಿಕೊಳ್ತಾನೆ.. ನೋಡೋಣ.