ಶಿವರಾಜ್ ಕುಮಾರ್, ದುನಿಯಾ ಸೂರಿ, ಶ್ರೀಕಾಂತ್ ಕಾಂಬಿನೇಷನ್ನಿನ ಟಗರು ಸೃಷ್ಟಿಸಿರುವ ಕ್ರೇಝ್ ಊಹೆಗೆ ನಿಲುಕದ್ದು. ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ, ಅಭಿಮಾನಿಗಳ ಕುತೂಹಲ ಹೆಚ್ಚುತ್ತಲೇ ಹೋಗುತ್ತಿದೆ. ಈಗ ಅಭಿಮಾನಿಗಳು ಥ್ರಿಲ್ಲಾಗುವ ಇನ್ನೊಂದು ಸುದ್ದಿ.
ಟಗರು ರಿಲೀಸ್ ದಿನ, ಮೊದಲ ಶೋ ನೋಡೋಕೆ ತೆಲುಗು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಪುರಿ ಜಗನ್ನಾಥ್ ಬರುತ್ತಿದ್ದಾರೆ. ಕನ್ನಡಕ್ಕೆ ಪುರಿ ಹೊಸಬರೇನಲ್ಲ. ಯುವರಾಜ, ಅಪ್ಪು ಚಿತ್ರಗಳನ್ನು ನಿರ್ದೇಶಿಸಿದ್ದವರು.
ಯುವರಾಜ ಚಿತ್ರದ ನಿರ್ಮಾಪಕರೂ ಆಗಿದ್ದ ಶ್ರೀಕಾಂತ್‍ಗೆ ಪುರಿ ಜಗನ್ನಾಥ್ ಆತ್ಮೀಯರೇ. ಇದೆಲ್ಲದರ ಜೊತೆಗೆ ಪುರಿ ಜಗನ್ನಾಥ್ ತುಂಬಾ ಕುತೂಹಲಗೊಂಡಿರುವುದು ದುನಿಯಾ ಸೂರಿ ಮೇಕಿಂಗ್ ಸ್ಟೈಲ್‍ಗೆ. ಅವರ ಬಗ್ಗೆ ಕೇಳಿದ್ದೇನೆ. ಅವರು ಕೆಲಸ ಮಾಡುವ ಶೈಲಿ ನನಗೆ ತುಂಬಾ ಇಷ್ಟ. ಟ್ರೇಲರ್ ಹಾಗೂ ಹಾಡುಗಳನ್ನು ನೋಡಿದ್ದೇನೆ. ಸಖತ್ತಾಗಿದೆ. ಸಿನಿಮಾ ಹಿಟ್ ಆಗಲಿ. ಸಿನಿಮಾವನ್ನು ಮೊದಲ ದಿನವೇ ನೋಡೋಕೆ ಕಾಯುತ್ತಿದ್ದೇನೆ ಎಂದಿದ್ದಾರೆ ಪುರಿ ಜಗನ್ನಾಥ್.
ಒಬ್ಬ ಸ್ಟಾರ್ ಡೈರೆಕ್ಟರ್, ಇನ್ನೊಬ್ಬ ಸ್ಟಾರ್ ಡೈರೆಕ್ಟರ್‍ನನ್ನು ಹೊಗಳುವುದು ಸುಮ್ಮನೆ ಮಾತಲ್ಲ. ಟಗರುಗಾಗಿ ಕನ್ನಡಿಗರು ಕಾಯುತ್ತಿದ್ದಾರೆ.