ಚಮಕ್ ನಂತರ ಗಣೇಶ್ ಮುಂದಿನ ಚಿತ್ರ ಯಾವುದು ಎಂಬ ಸಸ್ಪೆನ್ಸ್‍ಗೆ ಈಗ ಉತ್ತರ ಸಿಕ್ಕಿದೆ. ಪ್ರಶಾಂತ್ ರಾಜ್ ನಿರ್ದೇಶನದ ಆರೆಂಜ್ ಚಿತ್ರ ಸೆಟ್ ಏರಲು ಸಿದ್ಧವಾಗಿದೆ. ಫೆ.11ರಂದು ಗಣೇಶ್ ಪಾಲಿಗೆ ವಿಶೇಷ ದಿನ. ಆ ದಿನ ಗಣೇಶ್ ಮದುವೆಯ 10ನೇ ವಾರ್ಷಿಕೋತ್ಸವ. ಆ ದಿನವೇ ಚಿತ್ರದ ಮುಹೂರ್ತ ನಡೆಸಲು ನಿರ್ದೇಶಕ ಪ್ರಶಾಂತ್ ರಾಜ್ ಸಿದ್ಧತೆ ನಡೆಸಿದ್ದಾರೆ.
`ಝೂಮ್' ಚಿತ್ರದಲ್ಲಿ ಗಣೇಶ್ ಹೇರ್‍ಸ್ಟೈಲ್ ಬದಲಿಸಿದ್ದ ಪ್ರಶಾಂತ್ ರಾಜ್, ಈ ಚಿತ್ರದಲ್ಲಿ ಗಣೇಶ್‍ರನ್ನು ಇನ್ನಷ್ಟು ಸ್ಟೈಲಿಷ್ ಹಾಗೂ ರೊಮ್ಯಾಂಟಿಕ್ ಆಗಿ ತೋರಿಸಲಿದ್ದಾರೆ. ನಾಯಕಿ ಹಾಗೂ ಸಂಗೀತ ನಿರ್ದೇಶಕರ ಆಯ್ಕೆ ಅಂತಿಮವಾಗಿಲ್ಲ. ಉಳಿದಂತೆ ಕಥೆ, ಚಿತ್ರಕಥೆ, ಸಂಭಾಷನೆ, ಕ್ಯಾಮೆರಾ ಎಲ್ಲವನ್ನೂ ಫೈನಲ್ ಮಾಡಿದ್ದಾರೆ ಪ್ರಶಾಂತ್ ರಾಜ್.