ಮೊನ್ನೆ ಮೊನ್ನೆಯಷ್ಟೇ ನಿರ್ಮಾಪಕ ನವೀನ್ ಜೊತೆ ಹಸೆಮಣೆ ಏರಿದ ಜಾಕಿ ಭಾವನಾ, ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮದುವೆಯಾದ ನಂತರದ ಕೆಲವೇ ದಿನಗಳಲ್ಲಿ ಚಿತ್ರರಂಗಕ್ಕೆ ಮರಳಿರುವುದು ವಿಶೇಷ. ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರಕ್ಕೆ ನಾಯಕಿಯಾಗಿ ಭಾವನಾ ನಟಿಸುತ್ತಿದ್ದಾರೆ.
ಸಾಮಾನ್ಯವಾಗಿ ನಾಯಕಿಯರು ಮದುವೆಯಾದರೆ ಮಿನಿಮಮ್ ಒಂದು ವರ್ಷದವರೆಗೆ ಸುದ್ದಿಗೇ ಬರೋದಿಲ್ಲ. ಇನ್ನೂ ಕೆಲವರು ಒಂದು ವರ್ಷದ ನಂತರ ಇನ್ನೊಂದು ಸಿಹಿ ಸುದ್ದಿ ನೀಡುತ್ತಾರೆ. ಆದರೆ, ಭಾವನಾ ಹಾಗಲ್ಲ. ಸಿನಿಮಾದಲ್ಲಿ ನಟಿಸುವ ಸುದ್ದಿಯನ್ನೇ ಕೊಟ್ಟಿದ್ದಾರೆ.
ಸೋಮವಾರದಿಂದ ಚಿತ್ರೀಕರಣ ಶುರುಗಾಲಿದ್ದು, ಫೆ.7ರಿಂದ ಭಾವನಾ ಶೂಟಿಂಗ್‍ಗೆ ಬರಲಿದ್ದಾರೆ. ಬ್ಯೂಟಿ ಮತ್ತು ಅಭಿನಯ ಎರಡೂ ಗೊತ್ತಿರುವ ನಾಯಕಿ ಬೇಕಿತ್ತು. ಭಾವನಾ ಅವರು ಪಾತ್ರವನ್ನು ಕೇಳಿದ ತಕ್ಷಣ ಒಪ್ಪಿಕೊಂಡರು ಎಂದಿದ್ದಾರೆ ನಿರ್ಮಾಪಕ ವಿಖ್ಯಾತ್. ಚಿತ್ರಕ್ಕೆ ನರಸಿಂಹ ಎಂಬ ಹೊಸ ಪ್ರತಿಭೆ ನಿರ್ದೇಶಕ.