ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಅವರ ಮಗ ಅನೂಪ್ ಅವರ ಮದುವೆ ಫೆಬ್ರವರಿ 19ರಂದು ನಡೆಯಲಿದೆ. ಗೋವಿಂದು ಅವರ ಮಗನ ಮದುವೆಯೆಂದರೆ, ಸಹಜವಾಗಿಯೇ ಇಡೀ ಚಿತ್ರರಂಗ ಅತಿಥಿಯಾಗುತ್ತೆ. ಮದುವೆಗೆ ಗಣ್ಯರನ್ನು ಆಹ್ವಾನಿಸಲೆಂದೇ ಒಂದು ತಿಂಗಳು ಸಮಯವನ್ನಿಟ್ಟುಕೊಂಡಿರುವ ಗೋವಿಂದು ಅವರ ಬಳಗ ದೊಡ್ಡದು.
ಸ್ನೇಹಿತರು, ಹಿತೈಶಿಗಳಿಗೆ ಅಹ್ವಾನ ನೀಡಲು ಚೆನ್ನೈಗೆ ಹೋಗಿದ್ದ ಗೋವಿಂದು, ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನೂ ಮಗನ ಮದುವೆಗೆ ಆಹ್ವಾನಿಸಿದ್ದಾರೆ. ಮನೆಯಲ್ಲಿಯೇ ಗೋವಿಂದು ಅವರನ್ನು ಭೇಟಿ ಮಾಡಿರುವ ರಜಿನಿ, ಮದುವೆಗೆ ಖಂಡಿತಾ ಬರುತ್ತೇನೆ ಎಂದು ಭರವಸೆಯನ್ನೂ ಕೊಟ್ಟಿದ್ದಾರೆ.