` ಹಿರಿಯ ನಟಿ ಕೃಷ್ಣಕುಮಾರಿ ಇನ್ನಿಲ್ಲ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
senior actress krishna kumari
Actress Krishna Kumari Image

ಹಿರಿಯ ನಟಿ ಕೃಷ್ಣಕುಮಾರಿನಿಧನರಾಗಿದ್ದಾರೆ.  ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಕೃಷ್ಣಕುಮಾರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಕಪ್ಪು ಬಿಳುಪು ಚಿತ್ರಗಳ ಕಾಲದಲ್ಲಿ ಸೂಪರ್ ಸ್ಟಾರಿಣಿಯಾಗಿ ಮೆರೆದಿದ್ದ ಕೃಷ್ಣ ಕುಮಾರಿ, ಕನ್ನಡ, ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಕಲಾವಿದೆ. ಡಾ.ರಾಜ್ ಕುಮಾರ್, ಎನ್‍ಟಿಆರ್, ನಾಗೇಶ್ವರ ರಾವ್, ಕೃಷ್ಣಂ ರಾಜು, ಕಾಂತಾರಾವ್, ಶಿವಾಜಿ ಗಣೇಶನ್, ಜಗ್ಗಯ್ಯ ಸೇರಿದಂತೆ ಆಗಿನ ಕಾಲದ ಎಲ್ಲ ಸೂಪರ್ ಸ್ಟಾರ್‍ಗಳ ಜೊತೆ ನಟಿಸಿದ್ದವರು. ತೆಲುಗಿನಲ್ಲಂತೂ ಒಂದು ದಶಕದ ಕಾಲ ಅನಭಿಷಕ್ತ ರಾಣಿಯಾಗಿ ಮೆರೆದಿದ್ದರು.

ಡಾ.ರಾಜ್ ಜೊತೆ ಭಕ್ತ ಕನಕದಾಸ, ಆಶಾ ಸುಂದರಿ, ಭಕ್ತ ಕಬೀರ, ಸ್ವರ್ಣಗೌರಿ, ದಶಾವತಾರ, ಸತಿ ಸಾವಿತ್ರಿ, ಶ್ರೀಶೈಲ ಮಹಾತ್ಮೆ, ಜಲದುರ್ಗ ಚಿತ್ರಗಳಲ್ಲಿ ನಟಿಸಿದ್ದ ಕೃಷ್ಣ ಕುಮಾರಿ, ಭಕ್ತ ಕನಕದಾಸ ಚಿತ್ರದ ಅಭಿನಯಕ್ಕೆ ಪ್ರಶಸ್ತಿಯನ್ನೂ ಪಡೆದಿದ್ದರು.

ಪತ್ರಕರ್ತ ಮೋಹನ್ ಕೈತಾನ್ ಅವರ ಜೊತೆ ಮದುವೆಯಾಗಿದ್ದ ಕೃಷ್ಣ ಕುಮಾರಿ ಅವರಿಗೆ ಒಬ್ಬಳೇ ಮಗಳು. ಮಗಳು, ಅಳಿಯನ ಜೊತೆ ಬೆಂಗಳೂರಿನಲ್ಲಿಯೇ ನೆಲೆಸಿದ್ದ ಕೃಷ್ಣ ಕುಮಾರಿ ಚಿರನಿದ್ರೆಗೆ ಜಾರಿದ್ದಾರೆ. 

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery