` ಇನ್ಸ್‍ಪೆಕ್ಟರ್ ವಿಕ್ರಂ ಆದ ಪ್ರಜ್ವಲ್ ದೇವರಾಜ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
prajwal as inspector vikram
Prajwal Devaraj Image

ಇನ್ಸ್‍ಪೆಕ್ಟರ್ ವಿಕ್ರಂ ಎಂದರೆ, ಯಾರು ನೆನಪಾಗ್ತಾರೆ ಹೇಳಿ..? ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ದಿನೇಶ್ ಬಾಬು ನಿರ್ದೇಶನದ ಆ ಚಿತ್ರದಲ್ಲಿ ಶಿವರಾಜ್ ಕುಮಾರ್, ಫನ್ನಿ ಇನ್ಸ್‍ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದರು. ಕರ್ನಾಟಕ ಪೊಲೀಸ್ ಡಿಪಾರ್ಟ್‍ಮೆಂಟ್‍ನಲ್ಲಿ ನಾನು ಕೊಹಿನೂರ್ ಗೋಲ್ಡು ಎನ್ನುವ ಶಿವರಾಜ್ ಕುಮಾರ್, ಡ್ಯೂಟಿಯಲ್ಲಿ ಸ್ಟ್ರಿಕ್ಟ್. ಈಗ ಅದೇ ಹೆಸರಿನ ಚಿತ್ರವೊಂದು ಮತ್ತೊಮ್ಮೆ ಸೆಟ್ಟೇರಿದೆ. ಪ್ರಜ್ವಲ್ ದೇವರಾಜ್ ಅವರ ಹೊಸ ಸಿನಿಮಾದ ಹೆಸರು ಇನ್ಸ್‍ಪೆಕ್ಟರ್ ವಿಕ್ರಂ.

ಅಂದಹಾಗೆ ಈ ಚಿತ್ರ ಕೂಡಾ ತಮಾಷೆ ಸ್ವಭಾವದ ಇನ್ಸ್‍ಪೆಕ್ಟರ್ ಕುರಿತೇ ಇದೆಯಂತೆ. ಹಾಸ್ಯದ ಹೊನಲು ಉಕ್ಕಿ ಹರಿಯಲಲಿದೆಯಮತೆ. ಇದೊಂಥರಾ ದಬಾಂಗ್ ಶೈಲಿಯ ಚಿತ್ರ ಎಂದಿದ್ದಾರೆ ನಿರ್ಮಾಪಕ ವಿಖ್ಯಾತ್. ಚಿತ್ರದ ಚಿತ್ರೀಕರಣ ಮುಂದಿನ ತಿಂಗಳಿಂದ ಶುರುವಾಗಲಿದೆ.

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery