` ಜಾಕಿ ಭಾವನಾ ಸಪ್ತಪದಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jackie bhavana weds naveen
Actress Bhavana Wedded To Naveen

ಜಾಕಿ, ಬಚ್ಚನ್, ಯಾರೇ ಕೂಗಾಡಲಿ, ವಿಷ್ಣುವರ್ಧನ, ರೋಮಿಯೋ ಮೊದಲಾದ ಚಿತ್ರಗಳ ಮೂಲಕ ಕನ್ನಡ ಚಿತ್ರರಸಿಕರ ಮನ ಕದ್ದಿದ್ದ ಜಾಕಿ ಭಾವನಾ, ಸಪ್ತಪದಿ ತುಳಿದಿದ್ದಾರೆ. ಕನ್ನಡ ಚಿತ್ರ ನಿರ್ಮಾಪಕ ನವೀನ್‌ ಅವರೊಂದಿಗೆ ಜಾಕಿ ಭಾವನಾ ಅವರ ಮದವೆ  ಕೇರಳದ ತ್ರಿಶೂರ್​ನ ತಿರುವಂಬಾಡಿ ದೇವಾಲಯದಲ್ಲಿ ನೆರವೇರಿದೆ. ಕೇರಳ ಶೈಲಿಯಲ್ಲಿಯೇ ನಡೆದ ಮದುವೆಯಲ್ಲಿ ವಧು–ವರರ ಕುಟುಂಬದ ಆಪ್ತರು ಹಾಗೂ ಸ್ನೇಹಿತರಷ್ಟೇ ಭಾಗಿಯಾಗಿದ್ದರು.

bhavana_wedding.jpgಚಿತ್ರರಂಗದ ಸ್ನೇಹಿತರಿಗಾಗಿ ತ್ರಿಶ್ಶೂರ್‌ನಲ್ಲೇ ಆರತಕ್ಷತೆ ಸಮಾರಂಭ ನಿಗದಿಯಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಭಾವನಾ–ನವೀನ್‌ ನಿಶ್ಚಿತಾರ್ಥ ನೆರವೇರಿತ್ತು. ಆದರೆ, ಭಾವನಾ ಅವರ ತಂದೆಯ ಸಾವಿನ ನಂತರ ವಿವಾಹದ ದಿನಾಂಕ ಮುಂದೂಡಲಾಗಿತ್ತು. ಗಣೇಶ್‌–ಭಾವನಾ ಅಭಿನಯದ ರೋಮಿಯೊ ಚಿತ್ರವನ್ನು ನವೀನ್‌ ನಿರ್ಮಿಸಿದ್ದರು. ವಿಷ್ಣುವರ್ಧನ, ಟೋಪಿವಾಲಾ, ಜಾಕಿ ಸೇರಿ ಇತರೆ ಕನ್ನಡ ಚಿತ್ರಗಳಲ್ಲಿ ಭಾವನಾ ಅಭಿಯಿಸಿದ್ದಾರೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery