` ಅಣ್ಣಾವ್ರ ಸಿನಿಮಾ ಇಲ್ಲದಿದ್ರೂ ಡಾ.ರಾಜ್ ಕಟೌಟ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dr raj's cutout in nartaki theater
Dr Raj cutout

ಸಾಮಾನ್ಯವಾಗಿ ಡಾ.ರಾಜ್ ಕುಮಾರ್ ಅವರ ಯಾವುದೇ ಹಳೆಯ ಸಿನಿಮಾ ರಿಲೀಸ್ ಆದರೂ, ಅಭಿಮಾನಿಗಳು ಈಗಲೂ ಹಬ್ಬ ಮಾಡ್ತಾರೆ. ಚಿತ್ರಮಂದಿರದ ಎದುರು ದೊಡ್ಡ ಕಟೌಟ್ ಹಾಕಿ, ಥಿಯೇಟರಿಗೆ ಅಲಂಕಾರ ಮಾಡಿ ಸಂಭ್ರಮಿಸ್ತಾರೆ. ಈಗಲೂ ಅಂಥಾದ್ದೊಂದು ಸಂಭ್ರಮ ನರ್ತಕಿ ಥಿಯೇಟರ್ ಎದುರು ಕಾಣುತ್ತಿದೆ. ನರ್ತಕಿಯ ಎದುರು ಇದೇ 24ರಂದು ಅಣ್ಣಾವ್ರ 80 ಅಡಿ ಎತ್ತರದ ಬೃಹತ್ ಕಟೌಟ್ ಎದ್ದು ನಿಲ್ಲಲಿದೆ. ನಿಮಗೆ ಗೊತ್ತಿರಲಿ, ಆ ದಿನ ಡಾ.ರಾಜ್‍ರ ಯಾವುದೇ ಸಿನಿಮಾ ಬಿಡುಗಡೆ ಇಲ್ಲ.

ಅಣ್ಣಾವ್ರ ಕಟೌಟ್ ನಿಲ್ಲಿಸಿ, ತಮ್ಮ ಚಿತ್ರ ಬಿಡುಗಡೆ ಮಾಡುತ್ತಿರುವುದು ನಿರ್ಮಾಪಕ ನಿರ್ದೇಶಕ ಆರ್.ಚಂದ್ರು. ದುನಿಯಾ ವಿಜಯ್ ಅಭಿನಯದ `ಕನಕ' ಚಿತ್ರ ಜನವರಿ 26ರಂದು ತೆರೆ ಕಾಣುತ್ತಿದೆ. ಚಿತ್ರದಲ್ಲಿ ಹೀರೋ ಡಾ. ರಾಜ್ ಅಭಿಮಾನಿ. ಅಣ್ಣಾವ್ರ ಆದರ್ಶಗಳನ್ನಿಟ್ಟುಕೊಂಡು ಬದುಕುವ ಚಿತ್ರದ ನಾಯಕನಿಗಾಗಿ ಅಣ್ಣಾವ್ರ ಈ ಕಟೌಟ್ ನಿಲ್ಲಿಸುತ್ತಿದ್ದೇವೆ ಎಂದಿದ್ದಾರೆ ಚಂದ್ರು.

ಕನಕ, ಸುಮಾರು 350ರಿಂದ 400 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಡಾ.ರಾಜ್ ಅಭಿಮಾನದ ಥೀಮ್ ಇಟ್ಟುಕೊಂಡು ನಿರ್ಮಿಸಿರುವ ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ ಎಂಬ ಭರವಸೆಯಲ್ಲಿದ್ದಾರೆ ಚಂದ್ರು ಮತ್ತು ದುನಿಯಾ ವಿಜಯ್. ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಮಾನ್ವಿತಾ ಹರೀಶ್ ನಾಯಕಿಯರು.

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery