` 30 ಸೆಕೆಂಡ್ ಅರುಣ್ ಗೌಡಗೆ ಕಿಚ್ಚ ಕೊಟ್ಟ ಬಿರುದು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep gives title to aru gowda
Sudeep, Aru Gowda Image

3 ಗಂಟೆ 30 ದಿನ 30 ಸೆಕೆಂಡು ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವಾಗಲೇ ಚಿತ್ರದ ಹೀರೋ ಅರುಣ್ ಗೌಡಗೆ ಹೊಸದೊಂದು ಬಿರುದು ಸಿಕ್ಕಿದೆ. ಬಿರುದೇನು ಗೊತ್ತಾ..? ಇನ್-ಕಂಪ್ಲೀಟ್ ಸ್ಟಾರ್. ಕೊಟ್ಟಿರುವುದು ಕನ್ನಡಿಗರ ಕಿಚ್ಚ ಸುದೀಪ್.

kavyashetty_arugowda_sudeep.jpgಚಿತ್ರದ ಪ್ರಚಾರದ ಸಲುವಾಗಿ ಬಿಗ್‍ಬಾಸ್ ಶೋಗೆ ಎಂಟ್ರಿ ಕೊಟ್ಟಿದ್ದ ಅರುಣ್ ಗೌಡ ಹಾಗೂ ಕಾವ್ಯ ಶ್ರೀ ಜೊತೆ ಮಾತನಾಡುವಾಗ, ಅರುಣ್ ಗೌಡ ತಮ್ಮ ಇನ್-ಕಂಪ್ಲೀಟ್ ಕಥೆ  ಹೇಳಿಕೊಂಡರು. ಅವರು ಈಗಲೂ ಡಿಗ್ರಿ ಕಂಲೀಟ್ ಮಾಡಿಲ್ಲ. ಅಷ್ಟೇ ಅಲ್ಲ, ಯಾವುದೇ ಕೆಲಸ ಹಿಡಿದರೂ ಅದನ್ನು ಮುಗಿಸುವಷ್ಟರಲ್ಲಿ ಇನ್ನೇನೋ ಆಗಿ ಅರ್ಧಕ್ಕೆ ನಿಂತು ಹೋಗುತ್ತಂತೆ. ಇದನ್ನೆಲ್ಲ ಕೇಳಿದ ಕಿಚ್ಚ ಅರುಣ್ ಗೌಡಗೆ ಇನ್-ಕಂಪ್ಲೀಟ್ ಸ್ಟಾರ್ ಅನ್ನೋ ಬಿರುದನ್ನೂ ಕೊಟ್ಟರು.

ಕಿಚ್ಚ ಸುದೀಪ್ ಬಿರುದು ಕೊಟ್ಟಿದ್ದರ ಎಫೆಕ್ಟು, ಅವರ ಚಿತ್ರ ಚಿತ್ರಮಂದಿರಗಳಲ್ಲಿ, ಅದರಲ್ಲೂ ಮಲ್ಟಿಪ್ಲೆಕ್ಸುಗಳಲ್ಲಿ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ.