ರಾಜು ಕನ್ನಡ ಮೀಡಿಯಂ ಚಿತ್ರ ಕನ್ನಡಿಗರಿಗೆ, ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದ, ಇಂಗ್ಲಿಷ್ ಬಾರದವರಿಗೆ ಸ್ಫೂರ್ತಿ ತುಂಬುವ ಹಾಗಿದೆ. ಕನ್ನಡ ಕಲಿತವರೆಲ್ಲ ದಡ್ಡರಲ್ಲ, ಇಂಗ್ಲಿಷ್ ಗೊತ್ತಿದ್ದವರೆಲ್ಲ ಅತಿಮಾನುಷರಲ್ಲ ಎಂಬ ಸಂದೇಶ ಇರುವ ಚಿತ್ರವನ್ನು ನೀವೊಮ್ಮೆ ನೋಡಬೇಕು. ನೋಡಿ ಪ್ರೋತ್ಸಾಹಿಸಬೇಕು.
ರಾಜು ಕನ್ನಡ ಮೀಡಿಯಂ ಚಿತ್ರತಂಡ, ಖುದ್ದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅವರ ಮುಂದಿಟ್ಟಿರುವ ಬೇಡಿಕೆ ಇದು. ಅಂದಹಾಗೆ ಸಿದ್ದರಾಮಯ್ಯ ಕೂಡಾ ಕನ್ನಡಾಭಿಮಾನಿ. ಇನ್ನೂ ವಿಶೇಷವೆಂದರೆ, ರಾಜು ಕನ್ನಡ ಮೀಡಿಯಂ ಚಿತ್ರದ ಸಂದೇಶವನ್ನು ಸ್ವತಃ ಸಿದ್ದರಾಮಯ್ಯ ತಮ್ಮದೇ ಜೀವನದಲ್ಲಿ ಅಳವಡಿಸಿಕೊಂಡಿರುವವರು. ಕನ್ನಡದಲ್ಲಿ ಕಲಿತು, ಇಂಗ್ಲಿಷ್ ಗೊತ್ತಿಲ್ಲ ಎಂಬ ಕಾರಣಕ್ಕೆ ಕೀಳರಿಮೆಗೆ ಬೀಳಬೇಡಿ ಎಂದು ಹಲವು ಕಡೆ ಹೇಳಿರುವ ಸಿದ್ದರಾಮಯ್ಯ, ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಹೇಳಿದ್ದಾರೆ.