ಕಾಮುಕ ನಿರ್ಮಾಪಕರು ಎಲ್ಲ ಕಡೆ ಇದ್ದಾರೆ. ಚಾನ್ಸ್ ಕೊಡಿಸುತ್ತೇವೆ, ನಮ್ಮ ಜೊತೆ ಸಹಕರಿಸಿ ಎಂದು ನೇರವಾಗಿಯೇ ಮಂಚಕ್ಕೆ ಕರೆಯುವವರೂ ಇದ್ದಾರೆ. ನನಗೂ ಅಂತಹ ಅನುಭವಗಳಾಗಿವೆ ಎಂದು ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದರು ಶ್ರುತಿ. ನಾವು ಐವರಿದ್ದೇವೆ, ನಮಗೆ ಬೇಕಾದಂತೆ ಬಳಸಿಕೊಳ್ಳುತ್ತೇವೆ ಎಂದಿದ್ದ ತಮಿಳು ನಿರ್ಮಾಪಕರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಹೇಳಿದ್ದನ್ನೂ ಶ್ರುತಿ ಹೇಳಿಕೊಂಡಿದ್ದರು. ಅದಾದ ನಂತರ ತಮಗೆ ತಮಿಳಿನಲ್ಲಿ ಅವಕಾಶಗಳು ಸಿಗಲೇ ಇಲ್ಲ ಎಂಬುದನ್ನೂ ಹೇಳಿದ್ದರು. ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ವಿವಾದಕ್ಕೆ ಶ್ರುತಿ ನೀಡಿರುವ ಪ್ರತಿಕ್ರಿಯೆ ಇಷ್ಟು.
`ನಾನು ಏನು ಹೇಳಿದ್ದೇನೋ, ಅದಕ್ಕೆ ನಾನು ಬದ್ಧಳಾಗಿದ್ದೇನೆ. ವಿವಾದ ಸೃಷ್ಟಿಸಬೇಕು ಎಂದು ಹೇಳಿದ ವಿಚಾರ ಇದಲ್ಲ. ಕಾಂಪ್ರೊಮೈಸ್ ಮಾಡಿಕೊಂಡರೆ, ಅಂದುಕೊಂಡಿದ್ದನ್ನು ಸಾಧಿಸಬಹುದು ಎಂಬ ಯುವತಿಯರಿಗೆ ಇದು ಎಚ್ಚರಿಕೆ ಅಷ್ಟೆ. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಕೆಟ್ಟವರೇ ಇದ್ದಾರೆ ಎಂದೇನೂ ನಾನು ಹೇಳಿಲ್ಲ. ಇಲ್ಲಿಯೂ ಹಲವರು ಒಳ್ಳೆಯ ತಂತ್ರಜ್ಞರು, ನಿರ್ಮಾಪಕರು ಇದ್ದಾರೆ. ಅವರಲ್ಲಿ ಎಷ್ಟೋ ಜನರ ಜೊತೆ ನಾನು ಇನ್ನೂ ಕೆಲಸ ಮಾಡಿಲ್ಲ. ಈಗ ಬರುತ್ತಿರುವ ಎಷ್ಟೋ ಹೊಸ ಕಲಾವಿದರು, ಯಾವುದೇ ಕಿರುಕುಳ ಅನುಭವಿಸದೆ ಸ್ಟಾರ್ ಆಗಿದ್ದಾರೆ. ಪ್ರತಿಭೆ, ಪರಿಶ್ರಮದಿಂದ ಚಿತ್ರರಂಗದಲ್ಲಿ ಏನನ್ನಾದರೂ ಸಾಧಿಸಬಹುದೇ ಹೊರತು, ಅಡ್ಡದಾರಿಯಿಂದ ಅಲ್ಲ.''
ಇಷ್ಟಕ್ಕೂ ಶ್ರುತಿಯವರಿಗೆ ಬೆಳಗ್ಗೆ 5 ಗಂಟೆಯಿಂದಲೇ ದೂರವಾಣಿ ಕರೆಗಳು ಬರಲು ಶುರುವಾಗಿವೆ. ಕೊನೆಗೆ ಶ್ರುತಿ ದಿನವಿಡೀ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಟ್ಟುಕೊಂಡುಬಿಟ್ಟಿದ್ದಾರೆ. ಚಿತ್ರರಂಗದ ಹಲವರು ಅದರಲ್ಲೂ ನಾಯಕಿಯರು ಶ್ರುತಿ ಹರಿಹರನ್ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ಇದು ಸುದ್ದಿಯಲ್ಲಿರಲು ಮಾಡುವ ತಂತ್ರವಷ್ಟೇ ಎಂದು ಟೀಕಿಸಿದ್ದಾರೆ.
Related Articles :-