` ಹೆಬ್ಬುಲಿ ನಿರ್ಮಾಪಕರಿಂದ ಒಂದಲ್ಲಾ..ಎರಡಲ್ಲಾ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
hebbuli and rama rama rey team up
Satyaprakash, Umapathi Image

ಹೆಬ್ಬುಲಿ. ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಆ ಚಿತ್ರದ ನಿರ್ಮಾಪಕರು ಉಮಾಪತಿ. ರಾಮಾ ರಾಮಾ ರೇ.. ಅದ್ಭುತ ಸಂದೇಶ ಇದ್ದ ವಿಭಿನ್ನ ಚಿತ್ರ, ಬಾಕ್ಸಾಫೀಸ್‍ನಲ್ಲೂ ಸದ್ದು ಮಾಡಿತ್ತು. ಆ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್. ಈಗ ಅವರಿಬ್ಬರೂ ಜೊತೆಯಾಗಿದ್ದಾರೆ. ಒಂದಲ್ಲಾ.. ಎರಡಲ್ಲಾ..

umapathi_saryaprakash_team.jpgಒಂದಲ್ಲಾ.. ಎರಡಲ್ಲಾ.. ಅನ್ನೋದು ಚಿತ್ರದ ಟೈಟಲ್. ಗೊಂದಲ ಬೇಡ. ಚಿತ್ರದ ಮುಖ್ಯ ಪಾತ್ರಧಾರಿ 8ರಿಂದ 12 ವರ್ಷದ ಹುಡುಗ. ಆಡಿಷನ್ ಮೂಲಕವೇ ಆಯ್ಕೆ ನಡೆದಿದೆ. ಉಳಿದಂತೆ ಇಡೀ ಸಿನಿಮಾದಲ್ಲಿ ರಂಗಭೂಮಿ ಕಲಾವಿದರೇ ಇರಲಿದ್ದಾರೆ. ಅಂದಹಾಗೆ ಈ ಚಿತ್ರದ ನಾಯಕ ಯಾರು..? ನಾಯಕಿ ಯಾರು ಎಂದೆಲ್ಲ ಕೇಳೋಕೇ ಬರಬೇಡಿ. ಅಂತಹ ಕಲ್ಪನೆಯೇ ಇಲ್ಲಿಲ್ಲ. ಚಿತ್ರದ ಕಥೆಯೇ ಚಿತ್ರದ ಹೀರೋ.

Related Articles :-

Satyaprakash To Do A Film For Umapathi