` ಇನ್ನೊಂದು ಹೊಸ ಪ್ರತಿಭೆಗೆ ಚಾನ್ಸ್ ಕೊಟ್ಟ ಅಪ್ಪು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth's prk production
Puneeth Rajkumar Image

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸದಾ ಹೊಸ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಹೊಸಬರ ಚಿತ್ರಗಳಿಗೆ ಹಾಡುವ ಮೂಲಕ, ಆಡಿಯೋ ರಿಲೀಸ್, ಧ್ವನಿ ನೀಡುವುದು, ಚಿತ್ರದ ಪ್ರಚಾರಕ್ಕೆ ಸಹಕರಿಸುವುದು.. ಹೀಗೆ ಹೊಸಬರನ್ನು ಪ್ರೋತ್ಸಾಹಿಸುತ್ತಲೇ ಇರುವ ಪುನೀತ್ ರಾಜ್‍ಕುಮಾರ್, ತಮ್ಮದೇ ಬ್ಯಾನರ್ ಶುರು ಮಾಡಿದ ಮೇಲೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಈಗಾಗಲೇ ಕವಲು ದಾರಿ ಚಿತ್ರ ನಿರ್ಮಿಸುತ್ತಿರುವ ಪುನೀತ್ ರಾಜ್‍ಕುಮಾರ್, ತಮ್ಮ 2ನೇ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಹೊಸ ಚಿತ್ರಕ್ಕೆ ನಿರ್ದೇಶಕ ರಾಧಾಕೃಷ್ಣ ಎಂಬ ಯುವಕ. ಕಿರುಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ರಾಧಾಕೃಷ್ಣ ಅವರಿಗೆ ನಿರ್ದೇಶಕರಾಗುವ ಅವಕಾಶ ಕೊಟ್ಟಿದ್ದಾರೆ ಪುನೀತ್.

ಜನವರಿ 24ಕ್ಕೆ ಪಿಆರ್‍ಕೆ ಬ್ಯಾನರ್‍ನ ಹೊಸ ಚಿತ್ರ ಸೆಟ್ಟೇರುತ್ತಿದೆ. ಹೊಸ ಚಿತ್ರದಲ್ಲಿ ವಸಿಷ್ಟ ಸಿಂಹ, ರಾಜ್ ಬಿ.ಶೆಟ್ಟಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಮಿಥುನ್ ಮುಕುಂದನ್, ಚಿತ್ರದ ಸಂಗೀತ ನಿರ್ದೇಶಕ. ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ.

ಚಿತ್ರದ ಹೆಸರೇನು..? ಅದು ಜನವರಿ 24ರಂದೇ ಗೊತ್ತಾಗಲಿದೆ.

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery