` ಹಂಬಲ್ ಪೊಲಿಟಿಷಿಯನ್ ಲಾಭ-ನಷ್ಟದ ಲೆಕ್ಕ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
humble politicain nograj's box office collection
Humble Politician Nograj Image

ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್, ಈಗ ಗೆದ್ದ ಸಿನಿಮಾ. ಚಿತ್ರ ಬಿಡುಗಡೆಯಾದ ನಂತರ ತೆಲುಗಿನ ಅಜ್ಞಾತವಾಸಿಯನ್ನೂ  ಬಾಕ್ಸಾಫೀಸ್‍ನಲ್ಲಿ ಹಿಂದಿಕ್ಕಿದ್ದ ನೊಗ್‍ರಾಜ್, ಈಗ ನಿರ್ಮಾಪಕರ ಜೇಬನ್ನೂ ತುಂಬಿಸಿದ್ದಾನೆ. ಮಲ್ಪಿಪ್ಲೆಕ್ಸ್‍ಗಳಲ್ಲಿ ಮೋಡಿ ಮಾಡುತ್ತಿರುವ ನೊಗ್‍ರಾಜ್ ಸಿನಿಮಾ ಮೂರೇ ದಿನದಲ್ಲಿ ಚಿತ್ರದ ಬಜೆಟ್‍ನ್ನು ತೆಗೆದುಕೊಟ್ಟಿದೆ. ಈಗ ಬರೋದು ಬೋನಸ್ ಅಂದರೆ ಲಾಭ.

ಸ್ವತಃ ನಿರ್ಮಾಪಕ ಪುಷ್ಕರ್ ಮಲ್ಲಿಕಾಜುನಯ್ಯನವರ ಪ್ರಕಾರ, ಚಿತ್ರದ ಮೂರು ದಿನದ ಕಲೆಕ್ಷನ್‍ನಲ್ಲಿ ಬಂದ ಷೇರು 2 ಕೋಟಿ, 5 ಲಕ್ಷ. ಚಿತ್ರಕ್ಕೆ ಖರ್ಚಾಗಿದ್ದುದು 2 ಕೋಟಿ, 70 ಲಕ್ಷ. ಈಗ ಚಿತ್ರಮಂದಿರಗಳ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ವಿದೇಶಗಳಲ್ಲಿ ಇನ್ನೂ ಬಿಡುಗಡೆಯಾಗಬೇಕಿದೆ. ಟಿವಿ ರೈಟ್ಸ್ ಇನ್ನೂ ನಿರ್ಮಾಪಕರ ಬಳಿಯೇ ಇದೆ. ಹೀಗಾಗಿ ಈ ಚಿತ್ರ ಭರ್ಜರಿ ಲಾಭ ಮಾಡುವುದರಲ್ಲಿ ಸಂದೇಹವಿಲ್ಲ.

ಸಾಮಾನ್ಯವಾಗಿ ಚಿತ್ರತಂಡದವರು ತಮ್ಮ ಚಿತ್ರದ ಬಗ್ಗೆ ಬಂದ ಒಳ್ಳೆಯ ಅಭಿಪ್ರಾಯಗಳನ್ನೇ ಹೇಳ್ತಾರೆ. ಆದರೆ, ನೊಗ್‍ರಾಜ್ ತಂಡದವರು ಹಾಗಲ್ಲ. ಚಿತ್ರವನ್ನು ನಗರ ಪ್ರದೇಶಗಳಲ್ಲಿ ಮೆಚ್ಚಿಕೊಂಡಿದ್ದನ್ನೂ, ಉ.ಕರ್ನಾಟಕ ಭಾಗದಲ್ಲಿ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ ಎಂಬುದನ್ನೂ ಹೇಳಿಕೊಂಡರು. ಚಿತ್ರದಲ್ಲಿ ಇಂಗ್ಲಿಷ್ ಹೆಚ್ಚಿರುವ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದನ್ನೂ ಮುಚ್ಚಿಟ್ಟುಕೊಳ್ಳಲಿಲ್ಲ. 

ರಿಲೀಸ್ ಮಾಡೋದು ಪಕ್ಕಾ ಪ್ಲಾನ್. ಉ.ಕರ್ನಾಟಕ ಭಾಗದಲ್ಲಿ ಈಗ ಡಿಮ್ಯಾಂಡ್ ಕುದುರುತ್ತಿದೆ. ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ ಭಾಗದ ಎಲ್ಲ ಕಡೆ ಬಿಡುಗಡೆ ಮಾಡ್ತೆವೆ ಎಂದಿದ್ದಾರೆ ನಿರ್ಮಾಪಕರಲ್ಲಿ ಒಬ್ಬರಾದ ನಟ ರಕ್ಷಿತ್ ಶೆಟ್ಟಿ.

Ayushmanbhava Movie Gallery

Kabza Movie Launch Gallery