` 3 ಗಂಟೆ 30 ದಿನ 30 ಸೆಕೆಂಡ್ ಹಿಂದಿನ ನೈಜ ಕಥೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
3 gante movie real story
3 Gante 30 Dina 30 Second Movie Image

3 ಗಂಟೆ 30 ದಿನ 30 ಸೆಕೆಂಡ್ ಚಿತ್ರದ ಕಥೆಯಲ್ಲಿ ಹೀರೋ ಲಾಯರ್, ಹೀರೋಯಿನ್ ಟಿವಿ ಆ್ಯಂಕರ್. ದೇವರಾಜ್ ಅಂಗವಿಕಲ ಯೋಧರಾದರೆ, ಅವರ ಸಂಗಾತಿ ಸುಧಾರಾಣಿ. ಎಡಕಲ್ಲುಗುಡ್ಡದ ಚಂದ್ರಶೇಖರ್, ನಾಯಕಿಯ ತಂದೆ. ನಾಯಕ ಮತ್ತು ನಾಯಕಿಯ ಮಧ್ಯೆ ಒಂದು ಚಾಲೆಂಜ್ ಬಿದ್ದು ಶುರುವಾಗುವ ಕಥೆ, ವಿಭಿನ್ನ ಆಯಾಮಕ್ಕೆ ಹೊರಳಿಕೊಳ್ಳುತ್ತೆ. ಈಗಿನ ಯೂತ್ ಟ್ರೆಂಡ್‍ಗೆ ತಕ್ಕಂತೆ ಸಿದ್ಧವಾಗಿರುವ ಚಿತ್ರದಲ್ಲಿ ಪ್ರೀತಿ, ಥ್ರಿಲ್ಲರ್, ಮನರಂಜನೆ, ಕಚಗುಳಿ ಇಡುವ ಡೈಲಾಗ್, ಇಂಪಾದ ಹಾಡುಗಳು, ಮನಸೆಳೆಯುವ ಛಾಯಾಗ್ರಹಣ ಎಲ್ಲವೂ ಇದೆ.

ಜಾಹೀರಾತು ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಮಧುಸೂದನ್ ನಿರ್ದೇಶನದ ಈ ಚಿತ್ರಕ್ಕೆ ನಿಜವಾಗಲೂ ಸ್ಫೂರ್ತಿಯಾಗಿದ್ದು ಒಂದು ನೈಜಕಥೆಯಂತೆ. ಅವರು ಕಣ್ಣಾರೆ ಕಂಡ ಪ್ರೇಮ ಪ್ರಕರಣವೊಂದರಲ್ಲಿ ಮದುವೆಗೆ ಜಾತಿ ಅಡ್ಡಿಯಾಯ್ತು. ಅಂತಸ್ತಿನ ಸಮಸ್ಯೆಯೂ ಉದ್ಭವವಾಯ್ತು. ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ. ಆಗ ಶುರುವಾದ ತಳಮಳ 3 ಗಂಟೆ 30 ದಿನ 30 ಸೆಕೆಂಡ್ ಚಿತ್ರಕ್ಕೆ ಕಥೆಯಾಯ್ತು ಎಂದು ಹೇಳಿಕೊಂಡಿದ್ದಾರೆ ಮಧುಸೂದನ್.

ಆ ಸಾವಿನಿಂದ ಅವನು ಸಾಧಿಸಿದ್ದಾದರೂ ಏನು..? ಮನೆಯವರು, ಗೆಳೆಯರು ಒಂದಷ್ಟು ದಿನ ಕಣ್ಣೀರು ಹಾಕಿದರು. ಆಮೇಲೆ ಮರೆತರು. ಜೀವನ ನಡೆಯುತ್ತಲೇ ಇತ್ತು. ಯೌವ್ವನದಲ್ಲಿ ಹುಟ್ಟಿಕೊಳ್ಳುವ ಭಾವನೆಗಳಿಗೆ ನಾವು ಪ್ರೀತಿಯ ಮುದ್ರೆ ಒತ್ತುದ್ದೀವೆಯೋ.. ಅಥವಾ ಪ್ರೀತಿಯನ್ನು ಉಳಿಸಿಕೊಳ್ಳಲು ನಮಗೆ ಶಕ್ತಿಯಿಲ್ಲವೋ ಎಂಬ ತಾಕಲಾಟಗಳನ್ನಿಟ್ಟುಕೊಂಡು ಚಿತ್ರದ ಕಥೆ ಹೆಣೆದಿದ್ದಾರೆ ನಿರ್ದೇಶಕರು. ಸಿನಿಮಾ ಥಿಯೇಟರುಗಳಲ್ಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery