Print 
sa ra govindu, anup sa ra govindu saguva dariyalli,

User Rating: 0 / 5

Star inactiveStar inactiveStar inactiveStar inactiveStar inactive
 
saguva dariyalli audio launch
Sa Ra Govindu, Anup Sa Ra Govindu

ಅನೂಪ್ ಸಾ.ರಾ.ಗೋವಿಂದು ಅಭಿನಯದ `ಸಾಗುವ ದಾರಿಯಲ್ಲಿ' ಚಿತ್ರದ ಆಡಿಯೋ ರಿಲೀಸ್ ಆಗಿದೆ. ಅದ್ದೂರಿಯಾಗಿಯೇ ನಡೆದ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಪುನೀತ್ ರಾಜ್‍ಕುಮಾರ್, ಜಗ್ಗೇಶ್, ಸಾ.ರಾ.ಗೋವಿಂದು ಮುಖ್ಯ ಅತಿಥಿಗಳು. ಅಲ್ಲಿ ಜಗ್ಗೇಶ್ ಈ ಕಥೆ ಹೇಳಿದಾಗಲೇ ಅಲ್ಲಿದ್ದ ಹಲವರಿಗೆ ಅನೂಪ್ ನಿಜಜೀವನದ ಕಥೆ ಗೊತ್ತಾಗಿದ್ದು.

ಸಾಗುವ ದಾರಿಯಲ್ಲಿ ಚಿತ್ರದ ನಾಯಕನಿಗೆ ತಾಯಿ ಇರೋದಿಲ್ಲ. ತಂದೆಯೇ ಎಲ್ಲ. ಚಿತ್ರದಲ್ಲಿ ತಂದೆಯ ಪಾತ್ರ ನಿರ್ವಹಿಸಿರುವುದು ದೇವರಾಜ್. ತಂದೆಯ ಶಕ್ತಿಯನ್ನಿಟ್ಟುಕೊಂಡೇ ಜೀವನವನ್ನು ಗೆಲ್ಲುವ ಮಗನ ಪಾತ್ರ ಅನೂಪ್ ಸಾ.ರಾ.ಗೋವಿಂದು ಅವರದ್ದು. ನಿಜ ಹೇಳಬೇಕೆಂದರೆ, ನಿಜ ಜೀವನದಲ್ಲಿಯೂ ಹಾಗೆಯೇ ಇದೆ. ಸಾ.ರಾ.ಗೋವಿಂದು ಅವರು ಕೂಡಾ ಪತ್ನಿಯನ್ನು ಕಳೆದುಕೊಂಡವರು. ಹೀಗಾಗಿ ಅನೂಪ್ ಬೆಳೆದಿದ್ದು ಅಪ್ಪನ ಆರೈಕೆ, ಪ್ರೀತಿಯಲ್ಲಿ. ಮಗನನ್ನು ಓದಿಸಿ, ವಿದ್ಯಾವಂತನನ್ನಾಗಿಸಿ, ಸಿನಿಮಾ ಹೀರೋ ಮಾಡಿ.. ಈಗ ಮದುವೆಯನ್ನೂ ಫಿಕ್ಸ್ ಮಾಡಿದ್ದಾರೆ ಸಾ.ರಾ.ಗೋವಿಂದು. 

ಅಲ್ಲಿದ್ದ ಬಹುತೇಕರಿಗೆ ಇದು ಗೊತ್ತಿತ್ತಾದರೂ, ಜಗ್ಗೇಶ್ ಅದನ್ನು ಭಾವುಕರಾಗಿ ಹೇಳಿದಾಗ, ಎಲ್ಲರ ಕಣ್ಣಲ್ಲೂ ಸಾ.ರಾ.ಗೋವಿಂದು ಅವರ ಕಡೆಗೊಂದು ಮೆಚ್ಚುಗೆಯ ನೋಟವಿತ್ತು. ಶಿವಶಂಕರ್ ನಿರ್ಮಾಣದ ಈ ಚಿತ್ರಕ್ಕೆ, ಶಿವಕುಮಾರ್ ನಿರ್ದೇಶನವಿದೆ. ಪಲ್ಲವಿ ಗೌಡ, ಚಿತ್ರದ ನಾಯಕಿ.