ಬಾಕ್ಸಾಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಶಿವರಾಜ್ ಕುಮಾರ್, ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರ ಅರ್ಧಶತಕ ಬಾರಿಸುತ್ತಿದೆ. ನರ್ತನ್ ನಿರ್ದೇಶನದ ಚಿತ್ರ, ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿರುವುದು ನಿಜ. ಹೀಗಾಗಿ ಅಭಿಮಾನಿಗಳೆಲ್ಲ ಸೇರಿ ಶುಕ್ರವಾರ ಶಿವರಾಜ್ ಕುಮಾರ್ ಮನೆಯಲ್ಲೇ ಸಂಭ್ರಮಿಸಲು ನಿರ್ಧರಿಸಿದ್ದಾರೆ.
ನಿರ್ಮಾಪಕರಾದ ಜಯಣ್ಣ, ಭೋಗೇಂದ್ರ, ಶಿವರಾಜ್ ಕುಮಾರ್, ಶ್ರೀಮುರಳಿ, ಶಿವರಾಜ್ ಕುಮಾರ್ ಸೇನಾ ಸಮಿತಿ ಅಧ್ಯಕ್ಷ ಕೆ.ಪಿ.ಶ್ರೀಕಾಂತ್, ಗೌರವಾಧ್ಯಕ್ಷ ತ್ಯಾಗರಾಜ್, ರಾಜ್ಯಾಧ್ಯಕ್ಷ ಟಿ. ನಾರಾಯಣ್, ಎಂ. ಮಲ್ಲ, ಎಂ.ನಾಗರಾಜ್ ಸೇರಿದಂತೆ ಎಲ್ಲರೂ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿದ್ಧಾರೆ.
ಇಡೀ ಸಂಭ್ರಮದ ಮೂಲ ಸೃಷ್ಟಿಕರ್ತರು ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಸೇವಾ ಸಮಿತಿ ಹಾಗೂ ಗಂಡುಗಲಿ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಕಾರ್ಯಕರ್ತರು, ಶಿವಣ್ಣನ ಅಭಿಮಾನಿಗಳು.