ದಶಾವತಾರ ಎಂದರೆ ತಕ್ಷಣ ನೆನಪಾಗೋದು ಸಾಕ್ಷಾತ್ತು ಶ್ರೀಮನ್ನಾರಾಯಣ. ಅದು ದಶಾವತಾರ ಆಯ್ತು, ಇದೇನಿದು ಪಂಚಾವತಾರ..? ಕಿಚ್ಚ ಸುದೀಪ್ ಯಾಕೆ ಪಂಚಾವತಾರ ಎತ್ತುತ್ತಾರೆ..? ಇವುಗಳಿಗೆಲ್ಲ ಉತ್ತರ ಇರೋದು ರಾಜು ಕನ್ನಡ ಮೀಡಿಯಂನಲ್ಲಿ. ಚಿತ್ರದಲ್ಲಿ ಸುದೀಪ್ ಐದು ಅವತಾರಗಳಲ್ಲಿ ಕಾಣಿಸಿಕೊಳ್ತಾರಂತೆ.
ಅಂದಹಾಗೆ, ಚಿತ್ರದಲ್ಲಿ ಸುದೀಪ್ ಅತಿಥಿ ನಟರಲ್ಲ. ಇಡೀ ಚಿತ್ರದಲ್ಲಿ ಸುದೀಪ್ ಇರ್ತಾರೆ. ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿರೋ ಸುದೀಪ್, ಒಂದೊಂದು ದೃಶ್ಯದಲ್ಲಿ ಧರಿಸಿರುವ ಕಾಸ್ಟ್ಯೂಮ್ ಕೂಡಾ ಲಕ್ಷ ಲಕ್ಷ ಬಾಳುವಂತದ್ದು. ಮಹಾಶ್ರೀಮಂತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುದೀಪ್, ಚಿತ್ರದುದ್ದಕ್ಕೂ.. ಕ್ಲೈಮಾಕ್ಸ್‍ವರೆಗೂ ಇರ್ತಾರೆ.
ಸುದೀಪ್‍ಗೆ ಚಿತ್ರದಲ್ಲಿ ಒಂದೇ ಒಂದು ಹಾಡಾಗಲೀ, ಫೈಟ್ ಆಗಲೀ ಇಲ್ಲ. ಆದರೆ, ಸುದೀಪ್ ಅಭಿಮಾನಿಗಳು ಇಷ್ಟಪಡುವಂತಾ ಡೈಲಾಗ್‍ಗಳಿವೆ. ಪ್ರತಿ ದೃಶ್ಯದಲ್ಲೂ ಸುದೀಪ್ ಇಷ್ಟವಾಗುತ್ತಾ ಹೋಗುತ್ತಾರೆ ಅನ್ನೋದು ನಿರ್ಮಾಪಕ ಸುರೇಶ್ ಭರವಸೆ.
ಇನ್ನು ಈ ಚಿತ್ರವನ್ನು ಒಪ್ಪಿಕೊಳ್ಳೋಕೆ ಇಂಥದ್ದೇ ಕಾರಣ ಅಂಥಾ ಹೇಳೋಕಾಗಲ್ಲ. ಇಡೀ ಚಿತ್ರತಂಡಕ್ಕೆ ಸಿನಿಮಾ ಬಗ್ಗೆ ಪ್ರೀತಿ, ಪ್ಯಾಷನ್ ಸಿನಿಮಾ ಒಪ್ಪಿಕೊಳ್ಳೋ ಹಾಗೆ ಮಾಡ್ತು ಅಂಥಾರೆ ಸುದೀಪ್.
ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ನಿರ್ಮಾಪಕ, ನಿರ್ದೇಶಕ ಮತ್ತು ಸುದೀಪ್‍ರ ಸಮ್ಮಿಲನದ ರಾಜು ಕನ್ನಡ ಮೀಡಿಯಂ ಈ ವಾರ ತೆರೆಗೆ ಬರುತ್ತಿದೆ.