3 ಗಂಟೆ 30 ದಿನ 30 ಸೆಕೆಂಡು. ಟೈಟಲ್ಲೇ ವಿಚಿತ್ರ ಮತ್ತು ವಿಭಿನ್ನ. ಚಿತ್ರದ ಕಥೆಯೂ ಹಾಗೇ ವಿಭಿನ್ನವಾಗಿಯೇ ಇದೆ. ಸಿನಿಮಾದ ಟೈಟಲ್ ನೋಡಿದವರು, ಏನಿದರ ಮೀನಿಂಗು ಅಂತಾ ತಲೆಗೆ ಹುಳ ಬಿಟ್ಕೊಂಡಿರೋದಂತೂ ನಿಜ. ಲೆಕ್ಕದ ಪ್ರಕಾರ ಬಂದಿದ್ದರೆ, 30 ದಿನ ಮೊದಲು ಬರಬೇಕಿತ್ತು. ಆದರೆ, 3 ಗಂಟೆ ಬಂದು ಆಮೇಲೆ 30 ದಿನ ದಿ ಬರುತ್ತೆ. 30 ದಿನ ಆದ ಮೇಲೆ ಅರ್ಧ ನಿಮಿಷದ 30 ಸೆಕೆಂಡ್ ಯಾಕೆ ಬಂತು..? ಹೀಗೆ ಹತ್ತಾರು ಪ್ರಶ್ನೆಗಳು.
ಇವುಗಳಿಗೆ ಕಾರಣ ಹೇಳ್ತೀವಿ. ಚಿತ್ರದ ಹೀರೋ ಅರೂ ಗೌಡ ವಕೀಲ. ಎಂಥ ಕೇಸೇ ಇರಲಿ, ಇತ್ಯರ್ಥವಾಗದೆ ಒದ್ದಾಡುತ್ತಿರಲಿ, ಅದರಲ್ಲಿ ಎಂಥದ್ದೇ ಸಮಸ್ಯೆ ಇರಲಿ.. ಕೇವಲ 3 ಗಂಟೆಯಲ್ಲಿ.. ಅದೂ ಕೋರ್ಟ್‍ನ ಹೊರಗೇ ಪರಿಹಾರ ಹೇಳ್ತಾನೆ. ಅದು ಕೇವಲ 3 ಗಂಟೆಯಲ್ಲಿ.
ಹೀಗೆ 3 ಗಂಟೆಯಲ್ಲಿ ಪರಿಹಾರ ಹೇಳುವ ನಾಯಕ ಮತ್ತು ರಾಜ್ಯಕ್ಕೆಲ್ಲ ಬುದ್ದಿ ಹೇಳೋ ನಾಯಕಿ ಕಾವ್ಯಾಶೆಟ್ಟಿ ಮಧ್ಯೆ ಒಂದು ಚಾಲೆಂಜ್ ಉದ್ಭವವಾಗುತ್ತೆ. ಅದು 30 ದಿನಗಳ ರಿಯಾಲಿಟಿ ಶೋ. ಅದು ಮೇಲ್ನೋಟಕ್ಕೆ ಸರಳವಾಗಿ ಕಂಡರೂ, ಅಷ್ಟು ಸರಳವಲ್ಲ. ಅದು 30 ದಿನ.
ಆದರೆ, ಇಡೀ ಸಿನಿಮಾಗೆ 30 ಸೆಕೆಂಡ್‍ನಲ್ಲಿ ಪರಿಹಾರ, ತಿರುವು ಸಿಗ್ತಾ ಹೋಗುತ್ತೆ. ಅರ್ಧ ನಿಮಿಷದಲ್ಲಿ ಆಗುವ ಬದಲಾವಣೆಗಳೇ ಚಿತ್ರದ ಹೈಲೈಟ್ಸ್. ಅದು 30 ಸೆಕೆಂಡ್ಸ್.
ಜನವರಿ 19ಕ್ಕೆ 3 ಗಂಟೆ ಬಿಡುವು ಮಾಡಿಕೊಳ್ಳಿ. 30 ದಿನ, 30 ಸೆಕೆಂಡ್‍ನ ಲವ್ & ಥ್ರಿಲ್ ಅನುಭವಿಸಿ.