` ನಟ, ನಿರ್ದೇಶಕ, ನಿರ್ಮಾಪಕ ಕಾಶೀನಾಥ್ ಇನ್ನಿಲ್ಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kashinath no more
Kashinath Image

ಕನ್ನಡ ಚಿತ್ರರಂಗದ ಹೆಸರಾಂತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕಾಶೀನಾಥ್ ನಿಧನರಾಗಿದ್ದಾರೆ. ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಕಾಶೀನಾಥ್, ಬೆಂಗಳೂರಿನ ಶ್ರೀಶಂಕರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಶೀನಾಥ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರದವರಾದ ಕಾಶೀನಾಥ್, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಪರಿಚಿತ ಚಿತ್ರದಿಂದ ಶುರುವಾದ ಅವರ ಸಿನಿ ಪಯಣ, 3 ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ನಡೆದುಕೊಂಡು ಬಂದಿತ್ತು. ಕಳೆದ ವರ್ಷ ಬಿಡುಗಡೆಯಾಗಿದ್ದ ಚೌಕ, ಕಾಶೀನಾಥ್ ಅಭಿನಯದ ಕೊನೆಯ ಸಿನಿಮಾ. 

ನಟರಾಗಿ, ನಿರ್ದೇಶಕರಾಗಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದ ಕಾಶೀನಾಥ್, ಕನ್ನಡ ಚಿತ್ರರಂಗದ ಗುರು ಎಂದೇ ಖ್ಯಾತರಾಗಿದ್ದರು. ಶಂಕರ್‍ನಾಗ್ ನಂತರ, ಅತೀ ಹೆಚ್ಚು ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕಾಶೀನಾಥ್ ಅವರದ್ದು. ಉಪೇಂದ್ರ, ವಿ.ಮನೋಹರ್, ಸುನಿಲ್ ಕುಮಾರ್ ದೇಸಾಯಿ, ಸಾಧು ಕೋಕಿಲಾ ಸೇರಿದಂತೆ ಅದೆಷ್ಟು ಪ್ರತಿಭೆಗಳನ್ನು ಚಿತ್ರರಂಗಕ್ಕೆ ತಂದರೋ.. ಅವರೆಲ್ಲರೂ ಚಿತ್ರರಂಗದಲ್ಲಿ ಬೆಳಗುತ್ತಿರುವುದು ವಿಶೇಷ.

Kashinath Movie Gallery - Click Link 

Related Articles :-

Kashinath No More