ರಾಜು ಕನ್ನಡ ಮೀಡಿಯಂ. ಹೆಸರಿಗೆ ತಕ್ಕಂತೆ ಕನ್ನಡ ಮೀಡಿಯಂನಲ್ಲಿ ಓದಿದ ಹಳ್ಳಿ ಹುಡುಗನ ಕಥೆ. ಆತ ವಿದ್ಯಾಭ್ಯಾಸ ಮುಗಿಸಿದ ಮೇಲೆ ಕೆಲಸಕ್ಕೆ ಹುಡುಕುವ ಸಂಕಷ್ಟ, ಕೆಲಸ ಸಿಕ್ಕಮೇಲೆ ಇಂಗ್ಲಿಷ್ ಬಾರದೆ ಆತ ಅನುಭವಿಸುವ ಅವಮಾನಗಳನ್ನೆಲ್ಲ ಚಿತ್ರದಲ್ಲಿ ರಂಜನಾತ್ಮಕವಾಗಿಯೇ ಹೇಳಲಾಗಿದೆ.
ಫಸ್ಟ್ ರ್ಯಾಂಕ್ ರಾಜು ಚಿತ್ರದಲ್ಲಿ ಸಿಟಿಯಲ್ಲಿಯೇ ಹುಟ್ಟಿ ಬೆಳೆದ ಹುಡುಗನ ಕಥೆಯಿತ್ತು. ರ್ಯಾಂಕ್ ಹಿಂದೆ ಬಿದ್ದ ಅಪ್ಪ, ಅಮ್ಮ ತಮ್ಮ ಮಕ್ಕಳನ್ನು ಯಾವ ರೀತಿ ಹಾಳು ಮಾಡುತ್ತಾರೆ ಎಂಬ ಚಿತ್ರಣವಿತ್ತು. ಅದೇ ಚಿತ್ರತಂಡ ಈಗ ರಾಜು ಕನ್ನಡ ಮೀಡಿಯಂ ಚಿತ್ರ ಮಾಡಿದೆ.
ಈ ಸಿನಿಮಾ ಕೇವಲ ಮನರಂಜನೆಗಷ್ಟೇ ಅಲ್ಲ, ಸಿನಿಮಾ ನೋಡಿದವರಿಗೆ ಇದು ಸ್ಫೂರ್ತಿಯನ್ನೂ ತುಂಬಬಲ್ಲ ಚಿತ್ರ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ ನಿರ್ದೇಶಕ ನರೇಶ್.
ಅದಕ್ಕೇ ಹೇಳಿದ್ದು ನೀವು ಕನ್ನಡ ಮೀಡಿಯಂನಲ್ಲಿ ಓದಿದವರಾಗಿದ್ದರೆ, ಈ ಸಿನಿಮಾ ಮಿಸ್ ಮಾಡ್ಕೋಬೇಡಿ. ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರಾಗಿದ್ದರೆ, ನೀವು ಯಾವ ರೀತಿ ಕನ್ನಡದ ಮಕ್ಕಳನ್ನು ಗೋಳು ಹೊಯ್ಕೊಳ್ತೀರಿ, ಅದರಿಂದ ಅವರು ಅನುಭವಿಸುವ ಕಷ್ಟನಷ್ಟಗಳೇನು, ಅವಮಾನಗಳೇನು ಎಂಬುದನ್ನು ತಿಳಿದುಕೊಳ್ಳೋಕೆ ಸಿನಿಮಾ ನೋಡಿ.