3 ಗಂಟೆ 30 ದಿನ 30 ಸೆಕೆಂಡ್. ವಿಭಿನ್ನ ಟೈಟಲ್‍ನಿಂದ ಗಮನ ಸೆಳೆದಿರುವ ಈ ಸಿನಿಮಾ ಈ ವಾರವೇ ತೆರೆಗೆ ಬರುತ್ತಿದೆ. ಯಾವುದೇ ಫಾರ್ಮುಲಾ, ಟ್ರೆಂಡ್‍ನ ಹಿಂದೆ ಬೀಳದೆ ವಿಭಿನ್ನವಾಗಿ ಮಾಡಿರುವ ಸಿನಿಮಾ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ನಿರ್ದೇಶಕ ಮಧುಸೂದನ್.
ಚಿತ್ರದ ಕಥೆಯೇನು ಎಂದರೆ ಅದೊಂದು ಟಾಸ್ಕ್ ಅಂತಾರೆ ಡೈರೆಕ್ಟರ್. ಮೊದಲು ಅದು 30 ಗಂಟೆಗಳ ಟಾಸ್ಕ್. ನಂತರ 30 ದಿನಗಳ ಸೀರಿಯಸ್ ಚಾಲೆಂಜ್ ಆಗುತ್ತೆ. ಕೊನೆಗೆ 30 ಸೆಕೆಂಡ್‍ನಲ್ಲಿ ಟ್ವಿಸ್ಟ್ ಇಡೀ ಚಿತ್ರವನ್ನೇ ಬದಲಾಯಿಸುತ್ತೆ. ಈ ಕಾರಣಕ್ಕಾಗಿ 3 ಗಂಟೆ, 30 ದಿನ, 30 ಸೆಕೆಂಡ್ ಅನ್ನೋ ಟೈಟಲ್ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ನಿರ್ಮಾಪಕ ಮಧುಸೂದನ್.