` ಪೊಲಿಟಿಷಿಯನ್ ಪವರ್‍ಗೆ ತೆಲುಗು ಪವರ್ ಸ್ಟಾರ್ ಸುಸ್ತು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
agnyathavaasi loose shows
Humble Politician Nograj, Agnatavasi Image

ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್. ವಿಡಂಬನೆಯ ಕಾಮಿಡಿಯ ವಿಭಿನ್ನ ಕಥಾಹಂದರದ ಈ ಚಿತ್ರ, ಚಿತ್ರಮಂದಿರಗಳಿಗೆ ಸೆಳೆಯುತ್ತಿರುವುದು ಕ್ಲಾಸ್ ವರ್ಗದ ಪ್ರೇಕ್ಷಕರನ್ನು. ಮಾಸ್ ಅಂಶಗಳಿದ್ದರೂ, ಚಿತ್ರವನ್ನು ಹೆಚ್ಚು ಹೆಚ್ಚಾಗಿ ನೋಡಿ ಎಂಜಾಯ್ ಮಾಡುತ್ತಿರುವುದು ಕ್ಲಾಸ್ ವರ್ಗದ ಪ್ರೇಕ್ಷಕರು. ಚಿತ್ರದ ಅಬ್ಬರ ಹೇಗಿದೆಯೆಂದರೆ, ತೆಲುಗಿನ ಪವರ್ ಸ್ಟಾರ್ ಕೂಡಾ ಅಲ್ಲಾಡಿ ಹೋಗುವಂತಿದೆ.

ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ರಿಲೀಸ್ ಆದ ದಿನವೇ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಅಜ್ಞಾತವಾಸಿ ಕೂಡಾ ರಿಲೀಸ್ ಆಗಿತ್ತು. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ರಿಸ್ಕ್ ತೆಗೆದುಕೊಂಡರೇನೋ ಎಂದು ಗಾಂಧಿನಗರ ಮಾತನಾಡಿಕೊಂಡಿತ್ತು. ಈಗ ಗೆದ್ದಿರುವುದು ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್.

ಅಜ್ಞಾತವಾಸಿ ಚಿತ್ರದ ಓಪನಿಂಗ್ ಭರ್ಜರಿಯಾಗಿತ್ತಾದರೂ, ಚಿತ್ರದ ಬಗ್ಗೆ ಒಳ್ಳೆಯ ರಿಪೋರ್ಟ್ ಬಂದಿಲ್ಲ. ಹೀಗಾಗಿ ಬಿಡುಗಡೆಯಾದ 2ನೇ ದಿನದಿಂದಲೇ ಬ್ಯುಸಿನೆಸ್ ಡಲ್ ಹೊಡೆಯುತ್ತಿದೆ. ಅಜ್ಞಾತವಾಸಿಗಾಗಿ ಕನ್ನಡ ಚಿತ್ರಕ್ಕೆ ಥಿಯೇಟರು ಕೊಡದೆ ಕುಳಿತಿದ್ದವರು ಈಗ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್‍ಗೆ, ಅಜ್ಞಾತವಾಸಿ ಥಿಯೇಟರು, ಶೋಗಳನ್ನು ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ರಿಲೀಸ್ ಆದ ಎರಡೇ ದಿನಗಳಲ್ಲಿ ಚಿತ್ರದ ಶೋ ಹಾಗೂ ಥಿಯೇಟರುಗಳ ಸಂಖ್ಯೆ ಹೆಚ್ಚಾಗಿದೆ.

ಅಜ್ಞಾತವಾಸಿಯಲ್ಲಿ ಹೀರೋ ಪವರ್ ಸ್ಟಾರ್ ಪವನ್ ಕಲ್ಯಾಣ್. ಅಂದಹಾಗೆ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಚಿತ್ರದಲ್ಲೂ ಪವರ್ ಸ್ಟಾರ್ ಇದ್ದಾರೆ. ಅದು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಏನೇ ಇರಲಿ.. ಕನ್ನಡ ಚಿತ್ರರಂಗ ಬಯಸುವುದು ಇಂಥ ಗೆಲುವುಗಳನ್ನೇ. ಪರಭಾಷೆಯ ಚಿತ್ರದ ಎದುರು ಅಬ್ಬರಿಸುವ ಕನ್ನಡದ ಗೆಲುವನ್ನು.

Related Articles :-

'Humble Politician Nograj' Replaces 'Agnatavasi'