ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಮುಂದಿನ ಸಿನಿಮಾ ಯಾವುದು? ಅದು ಈಗ ಅಭಿಮಾನಿಗಳನ್ನು ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ಅಂಜನೀಪುತ್ರ ಭರ್ಜರಿಯಾಗಿ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಆದರೆ, ಪುನೀತ್‍ರ ಮುಂದಿನ ಸಿನಿಮಾ ಇನ್ನೂ ನಿರ್ಧಾರವಾಗಿಲ್ಲ. ಗೊಂದಲಕ್ಕೆ ಕಾರಣಗಳೂ ಇವೆ. ಏಕೆಂದರೆ ಕ್ಯೂನಲ್ಲಿ 3 ಚಿತ್ರಗಳಿವೆ.
ವಿಜಯ್ ಕಿರಗಂದೂರು ನಿರ್ಮಾಣದ ಸಂತೋಷ್ ಆನಂದ್‍ರಾಮ್ ನಿರ್ದೇಶನದ ಚಿತ್ರ ಒಂದು ಕಡೆ.. ರಾಕ್‍ಲೈನ್ ನಿರ್ಮಾಣದ ಪವನ್ ಒಡೆಯರ್ ನಿರ್ದೇಶನದ ಸಿನಿಮಾ ಮತ್ತೊಂದು ಕಡೆ.. ಸ್ವತಃ ಪುನೀತ್ ನಿರ್ಮಾಣದ ಶಶಾಂಕ್ ನಿರ್ದೇಶನದ ಸಿನಿಮಾ ಮಗದೊಂದು ಕಡೆ.. ಈ ಮೂರರಲ್ಲಿ ಮೊದಲು ಶುರುವಾಗುವ ಚಿತ್ರ ಯಾವುದು..?
ಮೂರೂ ಚಿತ್ರಗಳಿಗೆ ಸಿದ್ಧತೆ ನಡೆದಿದೆ. ಆದರೆ, ಮೊದಲು ಶುರುವಾಗುವ ಸಿನಿಮಾ ಯಾವುದು ಎಂದು ನನಗೂ ಗೊತ್ತಿಲ್ಲ. ಯಾವುದೇ ಗೊಂದಲ ಇಲ್ಲದಂತೆ ಸಿನಿಮಾ ಶುರು ಮಾಡೋಣ ಎಂದು ಹೇಳಿದ್ದೇನೆ. ಯಾವುದು ಮೊದಲು ಅನ್ನೋದು ಫೆಬ್ರವರಿ ಮೊದಲ ವಾರ ಗೊತ್ತಾಗಲಿದೆ ಎಂದಿದ್ದಾರೆ ಪುನೀತ್ ರಾಜ್‍ಕುಮಾರ್.