ಅಂಜನೀಪುತ್ರ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಈ ಸಿನಿಮಾ 25 ದಿನ ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಅಂಜನೀಪುತ್ರನಿಗೆ ನಿರ್ದೇಶಕ ಮತ್ತು ನಿರ್ಮಾಪಕರು ಇನ್ನಷ್ಟು ಪವರ್ ಕೊಟ್ಟಿದ್ದಾರೆ.
ಇಂದಿನಿಂದ ಚಿತ್ರಮಂದಿರಗಳಲ್ಲಿ ಒಂದು ಎಕ್ಸ್‍ಟ್ರಾ ಫೈಟ್ ಹಾಗೂ ಒಂದಿಷ್ಟು ದೃಶ್ಯಗಳನ್ನು ಸೇರಿಸಿದ್ದಾರೆ. ಇದು 25 ದಿನ ಪೂರೈಸಿರುವ ಸಂಭ್ರಮಕ್ಕೆ ಅಭಿಮಾನಿಗಳಿಗೆ ನೀಡುತ್ತಿರುವ ಉಡುಗೊರೆ ಎನ್ನುತ್ತಿದೆ ಚಿತ್ರತಂಡ. ಸಿನಿಮಾ.. ಇನ್ನಷ್ಟು..ಮತ್ತಷ್ಟು.. ಯಶಸ್ವಿಯಾಗಲಿ.