ದಂಡುಪಾಳ್ಯ ಚಿತ್ರದ ಎರಡು ಭಾಗಗಳು ಈಗಾಗಲೇ ತೆರೆಗೆ ಬಂದಿವೆ. ದಂಡುಪಾಳ್ಯ ಹಂತಕರ ಕ್ರೌರ್ಯದ ಕಥೆ ಹೇಳಿದ್ದ ಮೊದಲ ಭಾಗ ಹಿಟ್ ಆಗಿತ್ತು. ಆದರೆ, ಅದು ಪೊಲೀಸರ ಪಿತೂರಿ ಎಂಬಂತೆ ಚಿತ್ರಿಸಲಾಗಿದ್ದ 2 ಸುದ್ದಿ ಮಾಡಿತ್ತು. ಈಗ 3 ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಆಗಲೇ 4ನೇ ಭಾಗದ ಸುಳಿವು ಹೊರಬಿದ್ದಿದೆ.
ಶ್ರೀವಿನಾಸ ರಾಜು ಅವರೇ 4 ಚಿತ್ರಕ್ಕೂ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯಲಿದ್ದಾರಂತೆ. ನಿರ್ದೇಶನವೂ ಅವರದ್ದೇ ಇರುತ್ತೆ. ಆದರೆ, ಈ ಅಂತೆಕಂತೆಗಳಿಗೆಲ್ಲ ಮುಕ್ತಿ ಸಿಗುವುದು 4 ಚಿತ್ರ ಸೆಟ್ಟೇರಿದ ನಂತರ. ಸದ್ಯಕ್ಕೆ ಎಲ್ಲರ ಕುತೂಹಲದ ಕಣ್ಣಿರುವುದು 3 ಚಿತ್ರದತ್ತ. ಆ ಚಿತ್ರದಲ್ಲಿ ದಂಡುಪಾಳ್ಯ ಸರಣಿಗೆ ಯಾವ ತಿರುವು ಸಿಗಲಿದೆಯೋ.. ನೋಡಬೇಕು.