3 ಗಂಟೆ 30 ದಿನ 30 ಸೆಕೆಂಡ್ ಎಂಬ ಚಿತ್ರ ಕೇವಲ ಟೈಟಲ್, ವಿಭಿನ್ನತೆಯಿಂದಷ್ಟೇ ಅಲ್ಲ, ಚಿತ್ರದ ಹಿಂದೆಯೂ ಒಂದು ವಿಶೇಷ ಕಥೆಯಿದೆ. ಆ ಕಥೆಯಲ್ಲೊಂದು ಸ್ನೇಹದ ಇತಿಹಾಸವಿದೆ. ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರಿಬ್ಬರದ್ದೂ ಇಂದು ನಿನ್ನೆಯ ಸ್ನೇಹವಲ್ಲ. ಅದು 25 ವರ್ಷಗಳ ಹಿಂದಿನ ಕಥೆಯಿದೆ.
ಸುಮಾರು 25 ವರ್ಷಗಳ ಹಿಂದೆ ನಿರ್ಮಾಪಕ ಚಂದ್ರಶೇಖರ್ ಮತ್ತು ನಿರ್ದೇಶಕ ಮಧುಸೂದನ್, ಟೆಲಿಸೀರಿಯಲ್‍ಗೆ ಕೆಲಸ ಮಾಡ್ತಾ ಇದ್ರು. ಅದಾದ ಮೇಲೆ ಇಬ್ಬರೂ ತಮ್ಮದೇ ಆದ ಆ್ಯಡ್ ಏಜೆನ್ಸಿ ಆರಂಭಿಸಿದ್ರು. ಅದು ಈಗ ಕರ್ನಾಟಕದ ಟಾಪ್ 10 ಆ್ಯಡ್ ಏಜೆನ್ಸಿಗಳಲ್ಲಿ ಒಂದು. ಮಧುಸೂದನ್ ಕ್ರಿಯೇಟಿವ್ ವಿಭಾಗ ನೋಡಿಕೊಂಡರೆ, ಚಂದ್ರಶೇಖರ್ ಹಣಕಾಸಿನ ವಿಭಾಗದತ್ತ ಗಮನವಿಟ್ಟರು. ಕಂಪೆನಿ ಸಕ್ಸಸ್ ಕಂಡರೂ, ಇಬ್ಬರಿಗೂ ಒಂದು ಕೊರಗು ಇದ್ದೇ ಇತ್ತು. ಇದು ತಮ್ಮ ಕ್ಷೇತ್ರ ಅಲ್ಲ, ತಾವು ಇನ್ನೂ ಏನೋ ಮಾಡಬೇಕು ಎಂದು ಮನಸ್ಸು ಹಪಹಪಿಸತ್ತಿತ್ತು.
ಅದನ್ನು ನನಸು ಮಾಡಿಕೊಳ್ಳಲೆಂದು ಹೊರಟಾಗ ಸೃಷ್ಟಿಯಾಗಿದ್ದೇ 3 ಗಂಟೆ 30 ದಿನ 30 ಸೆಕೆಂಡ್ ಅನ್ನೋ ವಿಭಿನ್ನ ಕಲಾಕೃತಿ. ಈ ವಿಭಿನ್ನ ಸಿನಿಮಾದಲ್ಲಿ ಪ್ರೀತಿ, ಯುವಕರನ್ನು ಸೆಳೆಯುವ ಒಂದಿಷ್ಟು ತುಂಟತನ, ಗಂಭೀರ ಸಿನಿಮಾದವರನ್ನು ಆಕರ್ಷಿಸುವ ಗಂಭೀರವಾದ ಕಥೆ, ಮನರಂಜನೆಯನ್ನಷ್ಟೇ ಬಯಸುವವರಿಗೆ ಬೇಕಾದ ಮನರಂಜನೆ, ಅದ್ಭುತ ಹಾಡು, ಥ್ರಿಲ್ ಎಲ್ಲವೂ ಇದೆ. ಈ ಶುಕ್ರವಾರ.. ಬಿಡುವು ಮಾಡಿಕೊಳ್ಳಿ.