` ಜಯಂತ್ ಕಾಯ್ಕಿಣಿ ಅಭಿನಯದ ಟಗರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jayanth kaikini's selfie in tagaru
Jayanth Kaikini, Shivarajkumar Image

ಅಕ್ಷರಗಳ ಗಾರುಡಿಗ ಜಯಂತ್ ಕಾಯ್ಕಿಣಿ ಬರಹಗಾರರಾಗಿ ಗೊತ್ತು. ನಟರಾಗಿದ್ದು ಯಾವಾಗ..? ಇಷ್ಟಕ್ಕೂ ಟಗರು ಶಿವರಾಜ್ ಕುಮಾರ್ ಅಭಿನಯದ ಸಿನಿಮಾ. ಆ ಚಿತ್ರದಲ್ಲಿ ಕಾಯ್ಕಿಣಿ ಅವರ ಪಾತ್ರವೇನು..? ಜಯಂತ್ ಕಾಯ್ಕಿಣಿ ಇನ್ನು ಮುಂದೆ ಕಲಾವಿದರಾಗಿಯೂ ಕಾಣಿಸಿಕೊಳ್ತಾರಾ..? ಹೀಗೆ ಹಲವು ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿಯೇ ಮೂಡಿರುತ್ವೆ. 

ಟಗರು ಚಿತ್ರದಲ್ಲಿಕಾಯ್ಕಿಣಿ ಕಾಣಿಸಿಕೊಂಡಿರುವುದು ನಿಜ. ಆದರೆ, ಪಾತ್ರವಾಗಿ ಅಲ್ಲ. ಹಾಡಿನ ದೃಶ್ಯವೊಂದರಲ್ಲಿ ಸಾಹಿತಿಯಾಗಿಯೇ ಕಾಣಿಸಿಕೊಂಡಿದ್ದಾರೆ ಜಯಂತ್ ಕಾಯ್ಕಿಣಿ. ಶಿವರಾಜ್ ಕುಮಾರ್ ಮತ್ತು ಭಾವನಾ ಮಳೆಯಲ್ಲಿಯೇ ಕಾಯ್ಕಿಣಿ ಜೊತೆ ಒಂದು ಸೆಲ್ಫಿ ತೆಗೆಸಿಕೊಳ್ತಾರೆ. ಕಾಯ್ಕಿಣಿ ಚಿತ್ರದಲ್ಲಿ ತೆರೆಯ ಮೇಲೆ ಬರೋದು ಅಷ್ಟೆ.

ಕಾಯ್ಕಿಣಿ ಯೆಸ್ ಎಂದುಬಿಟ್ಟರೆ, ಬಣ್ಣ ಹಚ್ಚಿಸುವ ನಿರ್ದೇಶಕರಿಗೇನೂ ಕೊರತೆ ಇಲ್ಲ. ಈ ಹಿಂದೆ ಯೋಗರಾಜ್ ಭಟ್ಟರು ತಮ್ಮ ಪಂಚರಂಗಿ ಸಿನಿಮಾದಲ್ಲಿ ಒಂದ್ಸಲ ಹೀಗೇ ತೋರಿಸಿದ್ದರು. ಈ ಬಾರಿ ಸೂರಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಹೇಗೋ ಒಪ್ಪಿಸಿ, ಈ ದೃಶ್ಯದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದ್ದಾರೆ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery