ಹಂಸ ಟಿವಿ ಚಾನೆಲ್. ಇದು ಕನ್ನಡಕ್ಕೆ ಬರುತ್ತಿರುವ ಹೊಸ ನ್ಯೂಸ್ ಚಾನೆಲ್. ಸಂಪಾದಕರು ಯಾರು..? ಆಫೀಸ್ ಎಲ್ಲಿದೆ..? ಮಾಲೀಕರು ಯಾರು..? ಇಂಥ ಪ್ರಶ್ನೆಗಳೆಲ್ಲ ಬ್ರೇಕಿಂಗ್ ನ್ಯೂಸ್‍ನಂತೆ ತಲೆಯೊಳಗೆ ಮೂಡಿದ್ರೆ, ಅದಕ್ಕೆನಾವು ಜವಾಬ್ದಾರರಲ್ಲ.
ಈ ಹಂಸ ಚಾನೆಲ್ ಬರ್ತಿರೋದು 3 ಗಂಟೆ, 30 ದಿನ, 30 ಸೆಕೆಂಡ್ ಸಿನಿಮಾದಲ್ಲಿ. ಆ ಸಿನಿಮಾದಲ್ಲಿ ನಾಯಕಿ ಹಂಸ ಟಿವಿ ಚಾನೆಲ್ ಮಾಲಕಿ. ಟಿವಿ ಚಾನೆಲ್ ಓನರ್ ಮಗಳಾಗಿ ನಟಿಸಿರುವ ಕಾವ್ಯಾ ಶೆಟ್ಟಿ, ಲೇಡಿ ಅರ್ನಾಬ್ ಗೋಸ್ವಾಮಿ ಎಂದೇ ಫೇಮಸ್ ಆಗಿರ್ತಾರೆ. ಆಕೆ ಒಂದು ಶೋ ನಡೆಸಿಕೊಟ್ಟರೆ, ಮಿನಿಮಮ್ ಇಬ್ಬರು ರಾಜಕಾರಣಿಗಳು ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣ ಆಗಿರುತ್ತೆ.
ಇಂಥಾ ಸ್ಥಾನದಲ್ಲಿರುವ ನಾಯಕಿಗೆ ಲಾಯರ್ ಪಾತ್ರಧಾರಿ ನಾಯಕ ಚಾಲೆಂಜ್ ಹಾಕ್ತಾನೆ. ಚಿತ್ರಕ್ಕೆ ಟರ್ನಿಂಗ್ ಸಿಕ್ಕಿಬಿಡುತ್ತೆ. ಅನಂತರದ್ದು ಲವ್, ಥ್ರಿಲ್ಲರ್, ಸಸ್ಪೆನ್ಸ್ ಸ್ಟೋರಿ. ಜನವರಿ 19ಕ್ಕೆ ರೆಡಿಯಾಗಿ.