ರಾಜು ಕನ್ನಡ ಮೀಡಿಯಂ ಸಿನಿಮಾ ಇದೇ ಜನವರಿ 19ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾಗ್ತಾ ಇದೆ. ಅದಾದ ನಂತರ ಎರಡೇ ವಾರಗಳಲ್ಲಿ ವಿದೇಶಗಳಲ್ಲಿಯೂ ಬಿಡುಗಡೆ ಮಾಡೋಕೆ ಚಿತ್ರತಂಡ ನಿರ್ಧರಿಸಿದೆ. ರಾಜ್ಯದಲ್ಲಿಯೇ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ವಿದೇಶದಲ್ಲಿ ಚಿತ್ರವನ್ನು ಮಾರ್ಕೆಟ್ ಮಾಡೋಕೆ ಫಸ್ಟ್ ರ್ಯಾಂಕ್ ರಾಜು ಚಿತ್ರದ ಸಕ್ಸಸ್ ಹಾಗೂ ಸುದೀಪ್ ಎಂಬ ಎರಡು ಹೆಸರು ಸಾಕು.
ಸುದೀಪ್ ಅವರನ್ನು ಸ್ಫೂರ್ತಿಯಾಗಿಟ್ಟುಕೊಂಡು ಹೊರಡುವ ಕನ್ನಡ ಮಾಧ್ಯಮದಲ್ಲಿ ಓದಿದ ಹುಡುಗ, ವಿದೇಶದಲ್ಲಿ ಏನೇನೆಲ್ಲ ಸಾಧಿಸುತ್ತಾನೆ ಅನ್ನೊದು ಚಿತ್ರದ ಕಥೆ. ನವಿರಾದ ಹಾಸ್ಯನ್ನು ಎಲ್ಲಿಯೂ ಬಿಟ್ಟುಕೊಡದೆ ಚಿತ್ರಕಥೆ ಹೆಣೆಯಲಾಗಿದೆ. ನಿರ್ಮಾಪಕ, ನಾಯಕಿ ಬಿಟ್ಟರೆ ಇಡೀ ಸಿನಿಮಾದಲ್ಲಿರೋದು ಫಸ್ಟ್ ರ್ಯಾಂಕ್ ರಾಜು ಚಿತ್ರತಂಡ. ಹೀಗಾಗಿ ಇದು ಬೇರೆಯೇ ದಾಖಲೆ ಬರೆಯುತ್ತೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ ನಿರ್ಮಾಪಕ ಸುರೇಶ್.