ನೀವು ಆರ್‍ಸಿಬಿ ಪ್ಲೇಯರ್‍ಗಳನ್ನು ನೋಡಿರ್ತೀರಿ. ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎ.ಬಿ.ಡೆವಿಲಿಯರ್ಸ್ ಮೊದಲಾದವರೆಲ್ಲ ಕನ್ನಡದಲ್ಲಿ ಮಾತನಾಡಿದಾಗ ಥ್ರಿಲ್ ಆಗಿದ್ದೀರಿ. ಹಾಗೆ ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರಿಗೇ ಕನ್ನಡ ಹೇಳಿಕೊಡುತ್ತಿದ್ದಾತ ಮಿಸ್ಟರ್ ನಾಗ್. ನಮ್ಮ ಕನ್ನಡಿಗ ಡ್ಯಾನಿಶ್ ಸೇಟ್. ಈಗ ರಾಜಕೀಯ ಹೇಳಿಕೊಡೋಕೆ ಬಂದಿದ್ದಾರೆ.
ಈಗ ಡ್ಯಾನಿಶ್ ಸೇಟ್ ಅಭಿನಯದ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್, ಥಿಯೇಟರಿಗೆ ಬರುತ್ತಿದ್ದಾನೆ. ಬಂದೇ ಬಿಟ್ಟ.. ಇಡೀ ಚಿತ್ರದಲ್ಲಿ ಉಡಾಫೆ ರಾಜಕಾರಣಿ ಮತ್ತು ಪ್ರಾಮಾಣಿಕ ರಾಜಕಾರಣಿಯ ನಡುವಿನ ಜುಗಲ್‍ಬಂದಿಯಿದೆ. ನೊಗರಾಜ್ ಅಳಕ್‍ಪುಳಕ್ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಎದುರಾಗಿ ಅರುಣ್ ಪಾಟೀಲ್ ಇರ್ತಾರೆ. ನೊಗ್‍ರಾಜನ ಕ್ರೇಜೀ ಐಡಿಯಾಗಳಿಗೆ ಸ್ಫೂರ್ತಿ ತುಂಬೋದು ಸುಮುಖಿ ಸುರೇಶ್. ಒಟ್ಟಿನಲ್ಲಿ ಅದೊಂದು ಹಾಸ್ಯದೌತಣ. ನಗೆದ ದಾಳಿ. ಹಾಸ್ಯದ ಒಡ್ಡೋಲಗ.